24 X 7 Helpline No: 1916
For safer cleaning of septic tanks/ sewers 14420

ನಮ್ಮ ಬಗ್ಗೆ

  • Home >
  • ನಮ್ಮ ಬಗ್ಗೆ

ಬೆಂಗಳೂರು ಜಲ ಮಂಡಳಿಯ ಯೋಜನೆಗಳ ಒಂದು ಪಕ್ಷಿನೋಟ.

ಪ್ರಸ್ತಾವನೆ

ಬೆಂಗಳೂರು ಜಲಮಂಡಳಿಯು ರಾಜ್ಯ ಶಾಸನಸಭೆಯಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ಧೆಯಡಿ 10.09.1964ರಲ್ಲಿ ನೀರು ಪೂರೈಕೆ ಮತ್ತು ತ್ಯಾಜ್ಯ ನೀರಿನ ವಿಲೇವಾರಿಗಾಗಿಯೇ ರಚಿತವಾಗಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಮಂಡಳಿಯು ನೀರು ಪೂರೈಕೆ ಮತ್ತು ತ್ಯಾಜ್ಯ ನೀರಿನ ವಿಲೇವಾರಿಗಾಗಿಯೇ ರಚಿತವಾಗಿರುವ ಭಾರತದ ಸಂಸ್ಥೆಗಳಲ್ಲಿ ಪ್ರಪ್ರಥಮ ಸಂಸ್ಥೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 800 ಚ.ಕಿ.ಮೀ. ಪ್ರದೇಶ ಮಂಡಳಿಯ ಕಾರ್ಯಕ್ಷೇತ್ರವಾಗಿದೆ. ನಗರದ ಹೃದಯ ಭಾಗ- 245 ಚ.ಕಿ.ಮೀ, 8 ಸ್ಥಳೀಯ ಸಂಸ್ಥೆಗಳು-330 ಚ.ಕಿ.ಮೀ, {7 ನಗರಸಭೆ & 1 ಪುರಸಭೆ} ಹಾಗೂ 110 ಗ್ರಾಮಗಳು -225 ಚ.ಕಿ.ಮೀ. ಪ್ರದೇಶ).

#

ಮಂಡಳಿಗೆ ಕೆಳಗಿನ ಬದ್ದತೆಗಳಿವೆ

ಬೇಡಿಕೆಗೆ ಅನುಗುಣವಾಗಿ ನೀರು ಪೂರೈಕೆ, ತ್ಯಾಜ್ಯ ನೀರಿನ ನಿರ್ವಹಣಾ ಜಾಲ ನಿರ್ಮಿಸುವುದು ಮತ್ತು ತ್ಯಾಜ್ಯ ನೀರಿನ ಸುರಕ್ಷಿತ ವಿಲೇವಾರಿ, ಯೋಜನೆಗಳ ಅನುಷ್ಟಾನ ಮತ್ತು ನೀರಿನ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ತ್ಯಾಜ್ಯ ನೀರಿನ ಸುರಕ್ಷಿತ ವಿಲೇವಾರಿಗಾಗಿ ಯೋಜನೆಗಳನ್ನು ರೂಪಿಸುವುದಾಗಿದೆ. ದೀರ್ಘಾಕಾಲದಲ್ಲಿ ವ್ಯವಸ್ಥೆಯ ಸುರಕ್ಷಿತ ನಿರ್ವಹಣೆಗೆ ಅನುಕೂಲವಾಗುವಂತೆ ಯಾವುದೇ ಲಾಭ - ನಷ್ಟವಿಲ್ಲದ ರೀತಿ ನೀರಿನ ದರ ವಿಧಿಸುವುದು ಮತ್ತು ಸಂಗ್ರಹಿಸುವುದು, 1964ರಲ್ಲಿ ಸ್ಥಾಪಿತವಾದ ಮಂಡಳಿಯು ನಗರಕ್ಕೆ ಹಲವು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನೆಗಳನ್ನು ರೂಪಿಸಿ ಅನುಷ್ಟಾನ ಗೊಳಿಸಿದೆ.. ಅವುಗಳಲ್ಲಿ ಅತ್ಯಂತ ಮಹತ್ವದ ಯೋಜನೆಗಳೆಂದರೆ ಕಾವೇರಿ- 1 , 2 , 3 ಮತ್ತು ನಾಲ್ಕನೇ ಹಂತ 1 ಮತ್ತು 2 ನೇ ಘಟ್ಟದ ಯೋಜನೆಗಳು ಮತ್ತು ಒಳಚರಂಡಿ ವ್ಯವಸ್ಥೆ ಸುಧಾರಣಾ ಯೋನೆಗಳು ತ್ಯಾಜ್ಯ ನೀರನ ಸಂಗ್ರಹಣೆ, ಸಾಗಣೆ ಸಂಸ್ಕರಿಸುವ ಯೋಜನೆಗಳತ್ತ ಗಮನ ಹರಿಸಿವೆ. ಹಾಲಿ ಇರುವ ಒಳಚರಂಡಿ ವ್ಯವಸ್ಥೆಯು ನಗರದ ಹೃದಯ ಭಾಗದ 265 ಚ.ಕಿ.ಮೀ ಪ್ರದೇಶವನ್ನು ಆವರಿಸಿದ್ದು ಇಲ್ಲಿ ಮೂರು ಪ್ರಮುS ಸಂಸ್ಕರಣಾ ಘಟಕಗಳನ್ನು ವೃಷಭಾವತಿ ಕೋರಮಂಗಲ- ಚಲಘಟ್ಟ ಹಾಗೂ ಹೆಬ್ಬಾಳ ಕಣಿವೆ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ.(ಬೃಹತ್ ಮತ್ತು ಸಣ್ಣ) ನಗರಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಅದರಲ್ಲೂ ಪ್ರಮುಖವಾಗಿ 7 ನಗರಸಭೆ ಮತ್ತು ಪುರಸಭೆ ಪ್ರದೇಶಗಳಿಗೆ ಒಳಚರಂಡಿ ಸೌಲಭ್ಯ ಕಲ್ಪಿಸುವ ಕೆಲಸ ಮುಕ್ತಾಯದ ಹಂತದಲ್ಲಿದೆ.

 

ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಯ ಪಕ್ಷಿನೋಟ

ಕರ್ನಾಟಕದ ರಾಜ್ಯಧಾನಿ ಬೆಂಗಳೂರು ಭಾರತದ ಅತಿ ದೊಡ್ಡ ನಗರಗಳಲ್ಲಿ ಮೂರನೆಯದಾಗಿದ್ದು ಅತ್ಯಂತ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಶಿಕ್ಷಣ, ಐಟಿ/ಬಿಟಿ ಉದ್ಯಮ, ಅತ್ಯಾಧುನಿಕ ತಂತ್ರಜ್ಞಾನದ ಆಸ್ಪತ್ರೆಗಳು ಹಾಗೂ ಬಹು ರಾಷ್ಟ್ರೀಯ ಉದ್ಯಮಗಳ ಕೇಂದ್ರವಾಗಿದ್ದು ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. 2011ರ ಜನಗಣತಿಯಂತೆ ಬೆಂಗಳೂರು ನಗರದ ಜನಸಂಖ್ಯೆ 8.5 ದಶಲಕ್ಷ. 800 ಚ.ಕಿ.ಮೀ ಗೆ ವಿಸ್ತಾರಗೊಂಡಿರುವ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಜವಾಬ್ದಾರಿಯನ್ನು ಮಂಡಳಿಯು ಹೊಂದಿದೆ. ಬೆಂಗಳೂರಿನ ನೀರಿನ ಅಗತ್ಯಕ್ಕೆ ಕರ್ನಾಟಕ ಸರ್ಕಾರವು ಕಾವೇರಿ ನದಿಯ 19 ಟಿಎಂಸಿ ನೀರನ್ನು ನಿಗಧಿಗೊಳಿಸಿದೆ. 2012ರಲ್ಲಿ ಕಾವೇರಿ 4ನೇ ಹಂತ 2ನೇ ಘಟ್ಟ ಯೋಜನೆಯನ್ನು ಅನುಷ್ಠಾನಗೊಳಿಸಿದ ನಂತರ ಕಾವೇರಿ ನದಿಯಿಂದ ನಿಗಧಿತವಾಗಿದ್ದ ನೀರಿನ ಪ್ರಮಾಣ ಪೂರ್ಣಗೊಂಡಿದೆ. ಪ್ರಸ್ತುತ ಮಂಡಳಿಯು ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಕೆ ಯೋಜನೆಯ 1,2,3 & 4ನೇ ಹಂತ 1& 2ನೇ ಘಟ್ಟಕದ ಯೋಜನೆಗಳ ಮೂಲಕ ನೀರು ಪೂರೈಸುತ್ತಿದ್ದು, ಇವುಗಳ ಸ್ಥಾಪನಾ ಸಾಮಥ್ರ್ಯ 1310 ದಶಲಕ್ಷ ಲೀಟರ್.

ಈ ನೀರನ್ನು ಮಹಾನಗರಕ್ಕೆ ಸೇರ್ಪಡೆಯಾಗಿರುವ 225 ಚ.ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ 110 ಗ್ರಾಮಗಳನ್ನು ಹೊರತು ಪಡಿಸಿ ನಗರದ ಹೃದಯ ಭಾಗ, 7 ನಗರ ಸಭೆ ಮತ್ತು 01 ಪುರಸಭೆಯ ಒಟ್ಟಾರೆ 575 ಚ.ಕಿ.ಮೀ., ಪ್ರದೇಶಕ್ಕೆ ನೀಡಲಾಗುತ್ತಿದೆ. ಕಾವೇರಿ 4ನೇ ಹಂತ 2ನೇ ಘಟ್ಟಕದ ಯೋಜನೆಯ ಅನುಷ್ಠಾನದ ನಂತರವೂ ನೀರಿನ ಬೇಡಿಕೆಯುನ್ನು ಪೂರೈಸುವುದು ಮಂಡಳಿಗೆ ಕಷ್ಟಕರವಾಗಿದೆ. ಎತನ್ಮಧ್ಯೆ ಕರ್ನಾಟಕ ಸರ್ಕಾರದ ನಗರಾಭಿವೃದ್ದಿ ಇಲಾಖೆಯು ಬೆಂಗಳೂರು ನಗರಕ್ಕೆ 10 ಟಿಎಂಸಿ (ದಿನಂ ಪ್ರತಿ 775 ದ.ಲಾ.ಲೀ) ಹೆಚ್ಚುವರಿ ನೀರನ್ನು ನಿಗಧಿಗೊಳಿಸಿದೆ. ಬೆಂಗಳೂರು ನಗರಕ್ಕೆ ಕಾವೇರಿ 5ನೇ ಹಂತದ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಯೋಜನೆಗೆ ಜೈಕಾದಂತಹ (ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ) ಸಂಸ್ಥೆಗಳಿಂದ ಹಣಕಾಸಿನ ನೆರವನ್ನು ಪಡೆಯುವಸಲುವಾಗಿ ವಿಸ್ತøತ ಯೋಜನಾ ವರದಿ ಸಿದ್ದಪಡಿಸಲಾಗಿದೆ. ತಾಂತ್ರಿಕ ಅಂಶಗಳು ಹಾಗೂ ನೀರಿನ ಬೇಡಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾವೇರಿ 5ನೇ ಹಂತದ ಯೋಜನೆಗಳನ್ನು 2 ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ 500 ದ.ಲ.ಲೀ.,(6.45 ಟಿಎಂಸಿ) ಸಾಮಥ್ರ್ಯದ, ಎರಡನೇ ಹಂತದಲ್ಲಿ 275 ದ.ಲಾ.ಲೀ(3.55 ಟಿಎಂಸಿ) ಸಾಮಥ್ರ್ಯದ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಪ್ರಸ್ತುತ ಇರುವ ನೀರು ಪೂರೈಕೆ ಯೋಜನೆಗಳ ಚಿತ್ರಣ

ಬೆಂಗಳೂರು ನಗರಕ್ಕೆ 1896 ರವರೆಗೆ ನೀರು ಪೂರೈಕೆಯನ್ನು ಕಲ್ಯಾಣಿ ವ್ಯವಸ್ಥೆಯ ಮೂಲಕ ಧರ್ಮಾಂಬುದಿ, ಸಂಪಂಗಿ, ಹಲಸೂರು, ಸ್ಯಾಂಕಿ ಮುಂತಾದ ಕೆರೆಗಳಿಂದ ಒದಗಿಸಲಾಗುತ್ತಿತ್ತು. ಜೊತೆಗೆ ಸ್ಥಳೀಯ ಬಾವಿಗಳು, ಕೆರೆಗಳು ಹಾಗೂ ಕಲ್ಯಾಣಿಗಳಿಂದಲೂ ಸಹಾ ನೀರನ್ನು ಉಪಯೋಗಿಸಲಾಗುತಿತ್ತು. ಈ ಮೂಲಗಳಿಂದ ನೀರಿನ ಪೂರೈಕೆಯ ಕೊರತೆ ಕಂಡುಬಂದ ಕಾರಣ 1884ರಲ್ಲಿ ಅರ್ಕಾವತಿಯ ನದಿಯನ್ನು ಪ್ರಥಮವಾಗಿ ಅತಿ ದೊಡ್ಡ ಹಾಗೂ ವಿಶ್ವಾಸರ್ಹ ಮೂಲವೆಂದು ಗುರುತಿಸಲಾಯಿತು. 1896 ರಿಂದ ಸೋಸಿದ ನೀರಿನ ಪೂರೈಕೆ ಆರಂಭವಾಯಿತು. ನಗರದ ನಿರಂತರವಾಗಿ ಬೆಳವಣಿಗೆಯೊಂದಿಗೆ ಜನಸಂಖ್ಯೆಯೂ ಹೆಚ್ಚಿದ್ದರಿಂದ ಹೊಸ ಸಂಪನ್ಮೂಲಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಯಿತು. ನೀರಿನ ಪೂರೈಕೆಗೆ ಕಾವೇರಿ ನದಿಯನ್ನು ಗುರುತಿಸಲಾಯಿತು ಮತ್ತು ಕರ್ನಾಟಕ ಸರ್ಕಾರವು ನದಿ ನೀರನ್ನು ನಗರಕ್ಕೆ ನಿಗಧಿಗೊಳಿಸಿತು. 1974 ರಿಂದ ಕಾವೇರಿ ಮೂಲದಿಂದ ಹಂತ ಹಂತವಾಗಿ ನೀರು ಪೂರೈಕೆ ಯೋಜನೆಗಳನ್ನು ರೂಪಿಸಲಾಯಿತು. ಈ ಅಧ್ಯಾಯದಲ್ಲಿ ಪ್ರಸ್ತುತ ನೀರಿನ ಮೂಲಗಳಾದ ಅರ್ಕಾವತಿ ಮತ್ತು ಕಾವೇರಿ ನದಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ.

ಬೆಂಗಳೂರು ನಗಕ್ಕೆ ಶೋಧಿಸಿದ ನೀರನ್ನು ಪೂರೈಸುವ ಸಲುವಾಗಿ 1884ರಲ್ಲಿ ಅರ್ಕಾವತಿ ಮೂಲವನ್ನು ಗುರಿತಿಸಲಾಯಿತು. ನಗರದ ವಾಯುವ್ಯ ದಿಕ್ಕಿನಲ್ಲಿ ಸುಮಾರು 18 ಕಿ.ಮೀ ದೂರದ ಹೆಸರುಘಟ್ಟದ ಬಳಿ ಜಲಾಶಯ ಒಂದನ್ನು ನಿರ್ಮಿಸಲಾಯಿತು. ಜಲಾಶಯದಿಂದ ತರಬನಹಳ್ಳಿ ಮತ್ತು ಸೋಲಾದೇವನ ಹಳ್ಳಿಗೆ 7 ಕಿ.ಮೀ. ಉದ್ದದ ತೆರೆದ ಕಲ್ಲಿನ ಕಾಲುವೆ ಮೂಲಕ 29.5 ದ.ಲಾ.ಲೀ.,ನೀರು ಸಾಗಿಸಲಾಗುತ್ತಿತ್ತು. ಆ ಪೈಕಿ ತರಬನಹಳ್ಳಿಯಿಂದ ಪ್ರತಿ ದಿನ 7 ದ.ಲ.ಲೀ ನೀರನ್ನು ಮಿಲಿಟರಿ ಪ್ರದೇಶಕ್ಕೆ ಪೂರೈಸಲಾಗುತ್ತಿತ್ತು. ಸೋಲದೇವನ ಹಳ್ಳಿಯಿಂದ ದಿನಂಪ್ರತಿ 25.5 ದ.ಲ.ಲೀ. ನೀರನ್ನು ನಗರಕ್ಕೆ ಪಂಪ್ ಮಾಡಲಾಗುತ್ತಿತ್ತು. ನಗರಕ್ಕೆ 375 ಎಂಎಂ ಸಿ-ಐ ಗಾತ್ರದ 2 ಕೊಳವೆಗಳ ಮೂಲಕ ಮಲ್ಲೇಶ್ವರದ ಕಂಬೈಂಡ್ ಜ್ಯೂಯಲ್ ಫಿಲ್ಟರ್ ಗೆ ನೀರನ್ನು ರವಾನಿಸಿ ಶುದ್ಧೀಕರಿಸಲಾಗುತ್ತಿತ್ತು. 1896 ರಲ್ಲಿ ಸಿಜಿಎಫ್ ನಿಂದ ಶುದ್ದೀಕರಿಸಿದ ನೀರನ್ನು ಪ್ರಪ್ರಥಮವಾಗಿ ಪೂರೈಕೆ ಮಾಡಲಾಯಿತು.

ಹೆಸರಘಟ್ಟ ಮೂಲದಲ್ಲಿ ಕೆಲವು ಸುಧಾರಣೆಗಳನ್ನು ಮಾಡಿ ಕಲ್ಲಿನಲ್ಲಿ ನಿರ್ಮಿಸಿದ ತೆರೆದ ನಾಳದ ಮಾರ್ಗವನ್ನು ಬದಲಿಸಿ 1500 ಎಂಎಂ ವ್ಯಾಸದ 36 ಎಂಎಲ ಡಿ ಧಾರಣ ಸಾಮಥ್ರ್ಯದ ಆರ್ ಸಿಸಿ ವ್ಯೂಮ್ ಪೈಪ್ಗಳನ್ನು ಅಳವಡಿಸಲಾಯಿತು. ಅದೇರೀತಿ 375 ಎಂ.ಎಂ. ವ್ಯಾಸದ ಮತ್ತೋಂದು ಮಾರ್ಗವನ್ನು ಸೋಲಾದೇವನ ಹಳ್ಳಿಯಿಂದ ಹಾಕಲಾಯಿತು. ಈ ಮೂರು ಕೊಳವೆಮಾರ್ಗಗಳು 22.5 ಎಂ.ಎಲ್.ಡಿ ನೀರನ್ನು ಸಾಮಾನ್ಯ ಸ್ಥಿತಿಯಲ್ಲಿ ಸಾಗಿಸುವ ಸಾಮಥ್ರ್ಯವನ್ನು ಹೊಂದಿದ್ದು, ಅವುಗಳಲ್ಲಿ 13.5 ದ.ಲ.ಲೀ ನೀರನ್ನು ನಗರ ಪ್ರದೇಶಕ್ಕೆ, ಉಳಿದ ನೀರನ್ನು ಮಾರ್ಗದ ಕೈಗಾರಿಕೆಗಳಿಗೆ ಒದಗಿಸಲಾಗುತ್ತಿತ್ತು. ಪ್ರಸ್ತುತ ಮುಂಗಾರು ಮಳೆಯ ವೈಫಲ್ಯದಿಂದಾಗಿ ಮೂಲದಲ್ಲಿ ನೀರಿನ ಕೊರತೆಯಾಗಿದೆ. ಲಭ್ಯವಿದ್ದು ಕೇವಲ 4 ದ.ಲ.ಲೀ., ನೀರನ್ನು ಮೀಲಿಟರಿ ಹಾಗೂ ಮಾರ್ಗದಲ್ಲಿನ ಪೀಣ್ಯ ಬಡಾವಣೆಯ ಕೈಗಾರಿಕೆಗಳಿಗೆ ಮಾತ್ರ ನೀಡಲಾಗುತ್ತಿತ್ತು ಸಿಜಿಎಫ್ ಕಾರ್ಯನಿರ್ವಹಿಸದೆ ಇದ್ದುದರಿಂದ ಹಾಗೂ ನೀರು ಸ್ವೀಕರಿಸುವ ಹೆಚ್ ಎಂಟಿ, ಪೀಣ್ಯ ಬಡಾವಣೆ ಹಾಗೂ ರಕ್ಷಾಣ ಇಲಾಖೆಗೆ ಸಂಬಂಧಿಸಿದ ಸಂಸ್ಥೆಗಳು ತಮ್ಮದೇ ಆದ ಶುದ್ಧೀಕರಣ ಘಟಕಗಳನ್ನು ಹೊಂದಿರುವ ಕಾರಣ ಈ ನೀರನ್ನು ಕಚ್ಚಾನೀರಾಗಿ ಪೂರೈಸಲಾಗುತ್ತಿತ್ತು. ಪ್ರಸ್ತುತ ಈ ಮೂಲಗಳಿಂದ ನೀರನ್ನು ಪಡೆಯಲಾಗುತ್ತಿಲ್ಲ

ತಿಪ್ಪಗೊಂಡನಹಳ್ಳಿ (ಟಿ.ಜಿ.ಹಳ್ಳಿ)

ನಗರ ಬೆಳೆದಂತೆ ನೀರಿನ ಕೊರತೆ ಹೆಚ್ಚಿದ ಕಾರಣ 1933 ರಲ್ಲಿ ಬೆಂಗಳೂರಿನ ಪಶ್ಚಿಮಕ್ಕೆ 26 ಕಿ.ಮೀ. ದೂರದಲ್ಲಿ ಹೆಸರುಘಟ್ಟ ಜಲಾಶಯದ ಕೆಳ ಹರಿವಿನಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ತಿಪ್ಪಗೊಂಡನಹಳ್ಳಿ ಬಳಿ ಚಾಮರಾಜಸಾಗರ ಜಲಾಶಯವನ್ನು ನಿರ್ಮಿಸಲಾಯಿತು. ಟಿ ಜಿ ಹಳ್ಳಿ ಜಲಾಶಯದ ಕೆಳಭಾಗದಲ್ಲಿಯೇ ನೀರು ಶುದ್ಧೀಕರಣ ಘಟಕ ಇದೆ. ಮೊದಲನೇ ಹಂತದ ಯೋಜನೆಯನ್ನು 1933 ರ ಮಾರ್ಚ್ ನಲ್ಲಿ ಪೂರ್ಣಗೊಳಿಸಿದ್ದು, ಇದು ನೀರು ಪೂರೈಕೆ ಪ್ರಮಾಣವನ್ನು 28 ದ.ಲಾ.ಲೀಗೆ ಹೆಚ್ಚಿಸಿದೆ. ತದನಂತರದಲ್ಲಿ ಮೂಲಸೌಕರ್ಯವನ್ನು ಅಂದರೆ ಜಲಾಶಯದ ಸಾಮಥ್ರ್ಯಹೆಚ್ಚಿಸಿ ಹೆಚ್ಚುವರಿ ಶುದ್ಧೀಕರಣ ಮತ್ತು ಪಂಪಿಂಗ್ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಪೂರೈಕೆಯ ಪ್ರಮಾಣವನ್ನು ದಿನಂಪ್ರತಿ 149 ದ.ಲಾ.ಲೀ.ಗೆ ಹೆಚ್ಚಿಸಲಾಯಿತು.

ಎರಡು ಹಂತದ ಪಂಪಿಂಗ್ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸುಧಾರಣೆಗಳನ್ನು ತಂದಿದ್ದು, ಟಿ.ಜಿ.ಹಳ್ಳಿಯಲ್ಲಿ 158 ಮೀಟರ್ ಪಂಪಿಂಗ್ ಹೆಡ್ ಹಾಗೂ ತಾವರೇಕೆರೆಯಲ್ಲಿ 168 ಮೀಟರ್ ಪಂಪಿಂಗ್ ಹೆಡ್ ಗಳನ್ನು ಸ್ಥಾಪಿಲಾಯಿತು. ತಾವರೇಕೆರೆಯನ್ನು ಮಧ್ಯಾಂತರ ಪಂಪಿಂಗ್ ಸ್ಟೇಷನ್ ಹಾಗಿ ರೂಪಿಸಲಾಯಿತು. ನೀರಿನ ಪ್ರಸರಣಾ ಮಾರ್ಗವು 600 ಎಂ.ಎಂ, 675 ಎಂ.ಎಂ & 900 ಎಂಎಂ ವ್ಯಾಸದ 3 ಸಿಐ ಪೈಪ್ಗಳ ಪಂಪಿಂಗ್ ಮಾರ್ಗಗಳನ್ನು ಟಿ.ಜಿ.ಹಳ್ಳಿಯಿಂದ ಸಿಜೆಎಫ್ ವರೆಗೆ ಹೊಂದಿದೆ. ಕಾವೇರಿ 3ನೇ ಹಂತದ ಯೋಜನೆಯ ಅನುಷ್ಠಾನದ ನಂತರ ಮೇಲಿನ ಯೋಜನೆಯಲ್ಲಿ ಮುಂಗಾರಿನ ವೈಫಲ್ಯ ಹಾಗೂ ಹಾಲಿ ಇದ್ದ ಪಂಪಿಂಗ್ ವ್ಯವಸ್ಥೆಯ ಸೀಮಿತ ಸಾಮಥ್ರ್ಯದ ಕಾರಣವಾಗಿ ಬಹುತೇಕ ಸಂದರ್ಭಗಳಲ್ಲಿ 117 ಎಂಎಲ್ ಡಿ ನೀರು ಮಾತ್ರ ಲಭ್ಯವಾಗುತ್ತಿದ್ದು, ಆ ನೀರನ್ನು ಪಶ್ಚಿಮ ಕಾರ್ಡ್ ರಸ್ತೆ, ಬೆಗ್ಗರ್ ಕಲೋನಿ ಹಾಗೂ ಕೇತಮಾರನಹಳ್ಳಿ, ಸಿಜೆಎಫ್ ಗಳಿಗೆ ಮಾತ್ರ ಪೂರೈಸಲಾಗುತ್ತಿತ್ತು. ಮುಂಗಾರು ನಿರಂತರವಾಗಿ ವಿಫಲವಾದ ಕಾರಣ 1988ರಲ್ಲಿ ಜಲಾಶಕ್ಕೆ ನೀರು ಬರುವುದು ನಿಂತುಹೊಯಿತು. ಪ್ರಸ್ತುತ ಜಲಾಶಯಕ್ಕೆ ನೀರಿನ ಹರಿವು ಇರುವುದಿಲ್ಲ. ಇದರಿಂದಾ ಅರ್ಕಾವತಿ ವಲಯದ ಜಲಾಗಾರಗಳಿಗೂ ಸಹ ಕಾವೇರಿ ನೀರನ್ನೇ ಪೂರೈಸಲಾಗುತ್ತಿದೆ.

ಕಾವೇರಿ ನೀರು ಪೂರೈಕೆ ಯೋಜನೆಗಳು

1960 ರ ನಂತರದ ದಿನಗಳಲ್ಲಿ ಸುಮಾರು 16 ಲಕ್ಷದಷ್ಟಿದ್ದ ಜನಸಂಖ್ಯೆಯ ನೀರಿನ ಬೇಡಿಕೆಯನ್ನು ಅರ್ಕಾವತಿಯಿಂದ ಲಭ್ಯವಾಗುತ್ತಿದ್ದ 185 ದ.ಲ.ಲೀ. ನೀರು ಪೂರೈಸುವುದು ಕಷ್ಟವಾಯಿತು. ನಿರಂತರವಾಗಿ ಬೆಳೆಯುತ್ತಿದ್ದ ನಗರ ಮತ್ತು ಜನಸಂಖ್ಯೆ ಅಗತ್ಯವನ್ನು ಪೂರೈಸಲು ಹೊಸ ನೀರಿನ ಮೂಲಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ನಿರ್ಮಾಣವಾಯಿತು. ನಗರದ ದಕ್ಷಿಣಕ್ಕೆ 86 ಕಿ.ಮೀ ದೂರದಲ್ಲಿರುವ ಕಾವೇರಿ ನದಿಯು ಜೀವನದಿಯಾಗಿದ್ದು, ಕರ್ನಾಟಕ ಸರ್ಕಾರವು ಈ ನದಿಯಿಂದ ಜಲಮಂಡಲಿಗೆ ಕುಡಿಯುವ ನೀರನ್ನು ನಿಗಧಿಗೊಳಿಸಿತು. ಕಾವೇರಿ ಮೂಲದಿಂದ 1974 ರಿಂದ ಅನೇಕ ಹಂತಗಳಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಕಾವೇರಿ ನೀರು ಪೂರೈಕೆ ಯೋಜನೆ ಹಂತ -1 ಅನ್ನು 1974ರಲ್ಲಿ ಅನುಷ್ಠಾನಗೊಳಿಸಿದ್ದು, ಇದರಿಂದ 135 ದ.ಲ.ಲೀ ನೀರುನ್ನು ನಗರಕ್ಕೆ ಪೂರೈಸಲಾಗಿದೆ. ಆನಂತರ 2ನೇ ಹಂತದ ಯೋಜನೆಯನ್ನು 1982 ರಲ್ಲಿ ಅನುಷ್ಠಾನಗೊಳಿಸಿದ್ದು, ಈ ಯೋಜನೆಯು ಸಹಾ 135 ದ.ಲ.ಲೀ. ನೀರನ್ನು ನಗರಕ್ಕೆ ಪೂರೈಸುತ್ತಿದೆ. 1994 -95 ರಲ್ಲಿ 3ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಈ ಯೋಜನೆಯ ಸಾಮಥ್ರ್ಯ 270 ದ.ಲ.ಲೀ. ಯಾಗಿದೆ. 2006ರಲ್ಲಿ ಕಾವೇರಿ 4ನೇಹಂತ 1ನೇ ಘಟ್ಟದ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದರ ಸಾಮಥ್ರ್ಯವು ಸಹಾ 270 ದ.ಲಾ.ಲೀ., ಯಾಗಿರುತ್ತದೆ. ತದನಂತರ 2012ರಲ್ಲಿ ಕಾವೇರಿ 4ನೇ ಹಂತ 2ನೇಘಟ್ಟದ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದರ ಸಾಮಥ್ರ್ಯ 500 ದ.ಲ.ಲೀ. ಯಾಗಿರುತ್ತದೆ. ನೀರು ಪೂರೈಕೆ ಯೋಜನೆಯ ಪೂರ್ಣ ಮಾಹಿತಿಯನ್ನು ಕೆಳಗಿನ ಪಟ್ಟಿಯಲ್ಲಿ ತೋರಿಸಲಾಗಿದೆ.

ಟೇಬಲ್ : 1 -ನೀರು ಪೂರೈಕೆ ವ್ಯವಸ್ಥೆ

 
ಪ್ರಸ್ತುತ ಕಾವೇರಿ ಮೂಲದಿಂದ ಪೂರೈಕೆ 1350 ದ.ಲ.ಲೀ.
ಪ್ರಸ್ತುತ ಒದಗಿಸಲಾಗುತ್ತಿರುವ ಜನಸಂಖ್ಯೆನೀರು 8.5 ದ.ಲ.,
ನೀರು ಪೂರೈಕೆಯಾಗುತ್ತಿರುವಪ್ರದೇಶ 570 ಚ.ಕಿ.ಮೀ
ವಸತಿ ಸಂಪರ್ಕಗಳು 8.65 ಲಕ್ಷ
ನೀರು ಪೂರೈಕೆಯ ಉದ್ದ 8746 ಕಿ.ಮೀ
ಕೊಳವೆ ಮಾರ್ಗಗಳ ವ್ಯಾಸ 100 ರಿಂದ 1800 ಎಂಎಂ
ನೆಲಮಟ್ಟದ ಜಲಾಗಾರಗಳ ಸಂಖ್ಯೆ 57(885 ಎಂಎಲ್)
ಓವರ್ ಹೆಡ್ ಟ್ಯಾಂಕ್‍ ಗಳ ಸಂಖ್ಯೆ 36 (33 ಎಂಎಲ್)
ಬೂಸ್ಟರ್ ಪಂಪ್ ಗಳ ಸಂಖ್ಯೆ 62 ಸಂಖ್ಯೆ
ಉಚಿತ ನೀರು ಪೂರೈಸುವ ಸಾರ್ವಜನಿಕ ಕೊಳವೆಗಳು 7477 ಸಂಖ್ಯೆ
ನೀರಿನ ಟ್ಯಾಂಕರ್ ಲಾರಿಗಳು 62 ಸಂಖ್ಯೆ
ಪ್ರತಿ ತಿಂಗಳು ಪೂರೈಕೆ ಮಾಡುವ ನೀರಿನ ಪ್ರಮಾಣ 42,200 ಎಂಎಲ್
ತಲೆವಾರು ನೀರಿನ ಬಳಕೆ ದಿನಂ ಪ್ರತಿ 65 ಲೀ
ಸರಾಸರಿ ನೀರಿನ ದರ ರೂ.28/ಕಿ.ಲೀ.
 

ಟೇಬಲ್:2ವರ್ಗವಾರು ಬಳಕೆ ಪ್ರಮಾಣ ಮತ್ತು ಉತ್ಪತ್ತಿಯಾಗುವ ಕಂದಾಯ

 
ಬಳಕೆಯ ವಿಧಾನ ಸಂಪರ್ಕಗಳ ಸಂಖ್ಯೆ ಬಳಕೆ ದಶ ಲಕ್ಷಗಳಲ್ಲಿ ಶೇಕಡವಾರು ನೀರಿನ ಲೆಕ್ಕ ಬೇಡಿಕೆ ಲಕ್ಷಗಳಲ್ಲಿ ಶೇಕಡವಾರು ಕಂದಾಯ ಹಂಚಿಕೆ ಪ್ರತಿ ದಶಲಕ್ಷ ಲೀಟರ್‍ ಗೆ ಆದಾಯ ಉತ್ಪತ್ತಿ
ಗೃಹ ಬಳಕೆ 7,40,000 16,992 44.67 4,718 53.98 0.28
ಗೃಹೇತರ ಬಳಕೆ 42,100 1,623 3.84 1,961 22.44 1.21
ಭಾಗಶಃ ಗೃಹೇತರ 36,300 2,194 5.20 1,291 14.78 0.59
ಕೈಗಾರಿಕೆಗಳು ಬಿಐಎಎಲ್ &ಇತರೆ 2461 618 1.56 715 8.18 1.16
ಒಳಚರಂಡಿ ಸಂಪರ್ಕಗಳು 49100 0 0 54 0.62 -
ಒಟ್ಟು 8,70,141 21,427 50.75 8,740 100.00 0.41
ಸ್ವೀಕೃತಿಯಾಗುವ ಒಟ್ಟು ನೀರು   42,223        
ಹಂತರ   20796        
ಶೇಕಡವಾರು ಕಂದಾಯ ರಹಿತ ನೀರು   49.25 49.25      
      100      
 

ಒಳಚರಂಡಿ ವ್ಯವಸ್ಥೆಯ ಒಂದು ಪಕ್ಷಿನೋಟ

 

ಬೆಂಗಳೂರು ನಗರವು ಎರಡು ಪ್ರಮುಖ ನದಿಗಳಾದ ಅರ್ಕಾವತಿ ನದಿಯ ಪಶ್ಚಿಮಕ್ಕೆ ಮತ್ತು ಪೆನ್ನಾರ್ ನದಿಯ ಪೂರ್ವಕ್ಕೆ ಮಧ್ಯೆ ನದಿ ಪಾತ್ರದಲ್ಲಿದೆ. ಭೌಗೋಳಿಕವಾಗಿ ಹಲವು ನೈಸರ್ಗಿಕ ಕಣಿವೆಗಳನ್ನು ಹೊಂದಿದ್ದು. ನಗರದ ಉತ್ತರದ ಎತ್ತರದ ಹೈಗೌಂಡ್ಸ್ ನಿಂದ ಮಹಾನಗರದ ಹೊರವಲಯದಾಚೆಗೆ ದಕ್ಷಿಣಕ್ಕೆ ವಿಸ್ತರಣೆಗೊಂಡಿರುವ ಸಮತಟ್ಟಾದ ಪ್ರದೇಶಕ್ಕೆ ಕ್ರಮೇಣವಾಗಿ ಸಾಗುತ್ತವೆ. ವೃಷಭಾವತಿ, ಕೋರಮಂಗಲ ಮತ್ತು ಚಲಘಟ್ಟ ಮೂರು ಪ್ರಮುಖ ಕಣಿವೆಗಳಾಗಿದ್ದು ಈ ಮೂರೂ ಕಣಿವೆಗಳು ಉತ್ತರದಿಂದ ದಕ್ಷಿಣದಿಕ್ಕಿನೆಡೆಗೆಸಾಗುತ್ತವೆ ಮತ್ತು ಎತ್ತರದ ಪ್ರದೇಶದಿಂದ ದಕ್ಷಿಣಕ್ಕೆ ಹೆಚ್ಚಾಗಿ ಹರಡಿರುವ ಮಹಾನಗರದ ಪ್ರದೇಶವನ್ನು ಮೂರು ಪ್ರತ್ಯೇಕ ಬಸಿದು ಹೋಗುವ ವಲಯಗಳಾಗಿ ಪ್ರತ್ಯೇಕಿಸುತ್ತವೆ. 4ನೇ ಕಣಿವೆ ವ್ಯವಸ್ಥೆ ಹೆಬ್ಬಾಳ ಸರಣಿಯಾಗಿದ್ದು, ಇವು ಎತ್ತರ ಪ್ರದೇಶದಿಂದ ಉತ್ತರದ ಕಡೆಗೆ ಬಸಿದು ಈಶಾನ್ಯದ ಕಡೆಗೆ ಸಾಗುತ್ತವೆ. 5 ಸಣ್ಣ ಕಣಿವೆಗಳೆಂದರೆ ದಕ್ಷಿಣಕ್ಕೆ ಕತ್ರಿಗುಪ್ಪೆ ಮತ್ತು ತಾವರೆಕೆರೆ, ವಾಯುವ್ಯಕ್ಕೆ ಅರ್ಕಾವತಿ ಮತ್ತು ಕೇತಮಾರನಹಳ್ಳಿ ಮತ್ತು ಪೂರ್ವಕ್ಕೆ ಮಾರತಹಳ್ಳಿ,ಇವು ಪ್ರಮುಖ ಕಣಿವೆಗಳು ಹರಿವಿನ ಪ್ರದೇಶದ ವ್ಯಾಪ್ತಿಯಿಂದ ಹೊರಗಿವೆ. ಸ್ವತಂತ್ರವಾಗಿ ಮತ್ತು ಪ್ರತ್ಯೇಕವಾಗಿ ಹರಿಯಲಿದ್ದು, ಮಹಾನಗರ ಪ್ರದೇಶದ ಉಳಿದ ಭಾಗದ ವ್ಯಾಪ್ತಿಯನ್ನು ಒಳಗೊಂಡಿರುತ್ತವೆ. . ಬೆಂಗಳೂರು ನಗರದ ಸುತ್ತಲಿನ ಕಣಿವೆಗಳು ಇಳಿಜಾರಿನಿಂದ ಕೂಡಿದ್ದು, ಯಾವುದೇ ಪಂಪಿಂಗ್ ಸಹಾಯವಿಲ್ಲದೆ ನೈಸರ್ಗಿಕವಾಗಿ ಹರಿಯುವ ಕಣಿವೆಗಳಾಗಿವೆ. ಮಳೆನೀರು ಮತ್ತು ತ್ಯಾಜ್ಯ ನೀರು ನಗರದಿಂದಾಚೆಗೆ ಗುರುತ್ವಾಕರ್ಷಣೆಯಿಂದಲೆ ಹರಿದು ಹೋಗುತ್ತದೆ.

1992ರಲ್ಲಿ ಗೃಹ ಮತ್ತು ಕೈಗಾರಿಕ ತ್ಯಾಜ್ಯ ನೀರನ್ನು ಒಳಚರಂಡಿ ಮಾರ್ಗದ ಮೂಲಕ ಸಾಗಿಸುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಯಿತು. ಆರಂಭಿಕವಾಗಿ ನಗರದ ಹೃದಯ ಪ್ರದೇಶದ ಜನದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಯಿತು. ಕ್ರಮೇಣವಾಗಿ ಇದನ್ನು ವಿಸ್ತರಣೆ ಮಾಡಲಾಯಿತಾದರು ಆನಂತರ 1950 ರ ವರೆಗೆ ಇದು ಮುಂದುವರೆಯಲಿಲ್ಲ. 1950 ರ ನಂತರ ಬೃಹತ್ ಪ್ರಮಾಣದ ಒಳಚರಂಡಿ ಮಾರ್ಗಗಳ ಕಾಮಗಾರಿಯನ್ನು ಆರಂಬಿಸಲಾಯಿತು. 1964 ರಲ್ಲಿ ಮಂಡಳಿಯು ರಚನೆಯಾದ ನಂತರ ಒಳಚರಂಡಿ ಸೌಲಭ್ಯವಿಲ್ಲದ ಸ್ಥಳಗಳಲ್ಲಿ ಒಳಚರಂಡಿ ಕಲ್ಪಿಸುವ ಮತ್ತು ಕಣಿವೆಗಳಿಗೆ ಹರಿಯುವ ಮೊದಲು ತ್ಯಾಜ್ಯ ನೀರನ್ನು ಸಂಸ್ಕರಿಸುವ ಕೆಲಸವನ್ನು ಹಂತ ಹಂತವಾಗಿ ಕೈಗೊಳ್ಳಲಾಯಿತು. ನಗರದ ಮೂರು ಪ್ರಮುಖ ಕಣಿವೆಗಳಲ್ಲಿ ಸುಮಾರು 400 ದಶ ಲಕ್ಷ ಲೀಟರ್ ನೀರು ಹರಿಯುತ್ತದೆಂದು ಅಂದಾಜು ಮಾಡಲಾಯಿತು. ಖಾಸಗಿ ಕೊಳವೆ ಬಾವಿಯಿಂದ ಯಾವ ಪ್ರಮಾಣದಲ್ಲಿ ನೀರು ಬಳಕೆಯಾಗುತ್ತಿದೆ ಎಂಬುದರ ವೈಜ್ಞಾನಿಕ ಅಂದಾಜು ಆಗಿಲ್ಲದ ಕಾರಣ ವೃಷಭಾವತಿ, ಕೋರಮಂಗಳ-ಚಲಘಟ್ಟ ಮತ್ತು ಹೆಬ್ಬಾಳಗಳಲ್ಲಿ ವಾಸ್ತವದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಯಿದೆ. ನಗರದಲ್ಲಿನ ತ್ಯಾಜ್ಯ ನೀರಿನ ಹರಿವು ಆ ಪ್ರದೇಶದ ಭೌಗೋಳಿಕ ಲಕ್ಷಣಕ್ಕೆ ಅನುಸಾರವಾಗಿ 3 ಪ್ರಮುಖ ಕಣಿವೆಗಳು ಹಾಗೂ 5 ಉಪಪ್ರಮುಖ ಕಣಿವೆಗಳಿಗೆ ಯಾವುದೇ ಪಂಪಿಂಗ್ ಅಗತ್ಯವಿಲ್ಲದೆ ನೈಸರ್ಗಿಕವಾಗಿ ಹರಿದು ಹೋಗುತ್ತದೆ.

ಬೆಂಗಳೂರು ನಗರದ ಹೃದಯ ಭಾಗವು 245 ಚ.ಕಿ.ಮೀ. ಇದ್ದು, ಇದು ನಗರದ ಅತ್ಯಂತ ಹಳೆಯ ಪ್ರದೇಶವಾಗಿರುತ್ತದೆ. ಜಲಂಡಳಿಯು ಈ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ, ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಗ್ರಹಿ, ಸಾಗಿಸಿ, ಸಂಸ್ಕರೀಸುವ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ನಗರಕ್ಕೆ ಹಲವು ನೀರು ಪೂರೈಕೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಒಗ್ಗೂಡಿಸಲು 3300 ಕಿ.ಮೀ. ಗಳಷ್ಟು ಉದ್ದದ ಕಡಿಮೆ ವ್ಯಾಸದ ಕೊಳವೆ ಮಾರ್ಗಗಳನ್ನು ಅಳವಡಿಸಲಾಗಿದೆ. ಈ ರೀತಿ ಸಂಗ್ರಹಿಸಲಾಗುವ ತ್ಯಾಜ್ಯ ನೀರನ್ನು ಸಂಸ್ಕರಣಾ ಘಟಕಗಳಿಗೆ ಸಾಗಿಸಲು 300 ಕಿ.ಮೀ. ಉದ್ದದ ಹೆಚ್ಚಿನ ವ್ಯಾಸದ ಕೊಳವೆ ಮಾರ್ಗಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಕೆಲವು ಕೊಳವೆ ಮಾರ್ಗಗಳನ್ನು 40 ರಿಂದ 50 ವರ್ಷಗಳ ಹಿಂದೆ ಅಳವಡಿಸಲಾಗಿದೆ. ಅನೇಕ ಕಾರಣಗಳಿಗಾಗಿ ಕೊಳವೆ ಮಾರ್ಗಗಳು ತುಂಬಾ ಹಳೆಯದಾಗಿರುವುದರಿಂದ, ಒತ್ತುವರಿಯಾಗಿರುವುದರಿಂದ ಮತ್ತು ತೀವ್ರವಾಗಿ ಶೀಥಿಲವಾಗಿರುವುದರಿಂದ, ಮಾರ್ಗಗಳ ದುರ್ಬಳಕೆಯಾಗಿರುವುದರಿಂದ, ಮಳೆನೀರು ಕಾಲುವೆಗಳ ಪಕ್ಕದಲ್ಲಿ ಕಟ್ಟಿರುವ ಮನೆಗಳು, ವಸತಿ ಸಂಕೀರ್ಣಗಳು, ಬಡಾವಣೆಗಳು ಮುಂತಾದವು ತ್ಯಾಜ್ಯ ನೀರನ್ನು ನೆರವಾಗಿ ಹರಿಸುತ್ತಿರುವುದರಿಂದ, ಕೆಲವು ಭಾಗ ತ್ಯಾಜ್ಯ ನೀರು ಮಳೆನೀರು ಕಾಲುವೆಗಳಲ್ಲಿ ಹರಿದು ಕೆರೆಗಳನ್ನು ಪ್ರವೇಶಿಸುತ್ತದೆ.. ಇದರಿಂದ ಕೆರೆಗಳಲ್ಲಿನ ನೀರು ಮಲಿನವಾಗುತ್ತಿದೆ.. ಚಾಲ್ತಿಯಲ್ಲಿರುವ ಒಳಚರಂಡಿ ವ್ಯವಸ್ಥೆಯ ಮಾಹಿತಿ ಕೆಳಗಿನಂತಿದೆ.

  • ಒಳಚರಂಡಿ ಕೊಳವೆ ಮಾರ್ಗದ ಒಟ್ಟು ಉದ್ದಳತೆ - 6800 ಕಿ.ಮೀ
  • ಇಳಿ ಗುಂಡಿಗಳ ಸಂಖ್ಯೆ - 2.25 ಲಕ್ಷ
  • ಒಳಚರಂಡಿ ಸಂಪರ್ಕ ಪಡೆದಿರುವ ಮನೆಗಳು - 9 ಲಕ್ಷ
  • ಒಳಚರಂಡಿ ಮಾರ್ಗಗಳನ್ನು ಶುಚಿಗೊಳಿಸುವ ಜಟ್ಟಿಂಗ್ ಮತ್ತು ಸಕ್ಕಿಂಗ್ ಗಳ ಸಂಖ್ಯೆ - 125
  • ಹೂಳೆತ್ತುವ ಸಂಖ್ಯೆ - 6
  • ಒಳಚರಂಡಿ ಜಾಲ ಅಡ್ಡ ಕೊಳವೆ ಮಾರ್ಗಗಳು(< 300 ಎಂಎಂ ವ್ಯಾಸ) - 3367 ಕಿ.ಮೀ ಟ್ರಂಕ್ ಸಿವರ್ ಗಳು(>300 ಎಂಎಂ ವ್ಯಾಸ) - 302 ಕಿ.ಮೀ ಸಂಸ್ಕರಣಾ ಘಟಕಗಳ ಸಂಖ್ಯೆ - 14
  • ಉತ್ಪತ್ತಿಯಾಗುವ ತ್ಯಾಜ್ಯ ನೀರು - ದಿನಂ ಪ್ರತಿ 1400 ದ.ಲ.ಲೀ
  • ತ್ಯಾಜ್ಯ ನೀರಿನ ಸಂಸ್ಕರಣಾ ಸಾಮಥ್ರ್ಯ - ದಿನಂ ಪ್ರತಿ 721 ದ.ಲ.ಲೀ
  • ಸರಾಸರಿ ಸಂಸ್ಕರಣೆ - ದಿನಂ ಪ್ರತಿ 520 ದ.ಲ.ಲೀ ಚಿತ್ರ :

2 ನಗರದ ಹೃದಯ ಭಾಗದ ಒಳಚರಂಡಿ ಜಾಲ

ಅಡ್ಡ ಕೊಳವೆ ಮಾರ್ಗ ವ್ಯವಸ್ಥೆ ಮನೆಗಳಿಂದ ಆರಂಭವಾಗಲಿದ್ದು.ಸಬ್ ಮೇನ್ ಗಳಿಗೆ ಸಂಪರ್ಕಿಸುತ್ತವೆ. ಈ ಸಂಪರ್ಕ ಜಾಲದಲ್ಲಿ ಹಾಗಿಂದಾಗೆ ತಲೆದೋರುವ ಸಮಸ್ಯೆಗಳನ್ನು ಮಂಡಳಿಯ ಅನುದಾನದಲ್ಲಿಯೇ ನಿರ್ವಹಿಸಲಾಗುತ್ತದೆ. ಆದರೆ ಬೃಹತ್ ಗಾತ್ರದ ಕೊಳವೆ ಮಾರ್ಗಗಳ ನಿರ್ವಹಣೆಗೆ ಹೆಚ್ಚಿನ ವೆಚ್ಚವಾಗಲಿದ್ದು, ಈ ವೆಚ್ಚಕ್ಕೆ ಯೋಜನೆಗಳನ್ನು ಸಿದ್ದಪಡಿಸಲಾಗಿದೆ. ಹಣಕಾಸಿನ ನೆರವು ದೊರೆತ ನಂತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ತ್ಯಾಜ್ಯ ನೀರಿನ ಸಂಸ್ಕರಣೆಗೆ ಮಂಡಳಿಯು ದಿನಂಪ್ರತಿ 721 ದ.ಲ.ಲೀ ಸಾಮಥ್ರ್ಯದ 14 ಘಟಕಗಳನ್ನು ಸ್ಥಾಪಿಸಿದೆ. ಅವುಗಳ ವಿವರ ಇಂತಿದೆ.

ಟೇಬಲ್ : 03 ಹಾಲಿ ಇರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು

 
ಘಟಕ ಸಾಮಥ್ರ್ಯ (ದಿನಂ ಪ್ರತಿ ದ.ಲಾ.ಲೀ ಗಳಲ್ಲಿ)
ವೃಷಾಭಾವತಿ ಕಣಿವೆ 180
ಕೆ & ಸಿ ಕಣಿವೆ 248
ಹೆಬ್ಬಾಳ ಕಣಿವೆ 60
ಮಡಿವಾಳ 04
ಕೆಂಪಾಬೂದಿ 01
ಯಲಹಂಕ 10
ಮೈಲಾಸಂದ್ರ 75
ನಾಗಸಂದ್ರ 20
ಜಕ್ಕೂರು 10
ಕೆ.ಆರ್.ಪುರ 20
ಕಾಡಬೇಸನಹಳ್ಳಿ 50
ರಾಜ ಕಣಿವೆ 40
ಕಬ್ಬನ್ ಪಾರ್ಕ್ 1.5
ಲಾಲ್ ಬಾಗ್ 1.5
ಒಟ್ಟು 721
 

ಪ್ರಗತಿಯಲ್ಲಿರುವ ನೀರು ಪೂರೈಕೆ ಯೋಜನೆಗಳು

ನೀರು ಶುದ್ಧೀಕಣ ಘಟಕಗಳು

ಟಿ.ಕೆ.ಹಳ್ಳಿಯಲ್ಲಿ ಕಾವೇರಿ 1 ಮತ್ತು 2ನೇ ಹಂತದ ನೀರು ಶುದ್ಧೀಕಣ ಘಟಕಗಳ ಬದಲಿಗೆ 300 ದ.¯ .ಲೀ. ಸಾಮಥ್ರ್ಯದ ಶುದ್ಧೀಕರಣ ಘಟಕವನ್ನು ಸ್ಥಾಪಿಸುವುದು, ಕಾವೇರಿ 3ನೇ ಹಂತದ 300 ಎಂ.ಎಲ್.ಡಿ. ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ಶುದ್ದೀಕರಣ ಘಟಕಗಳನ್ನು ಸಂಪೂರ್ಣವಾಗಿ ಸ್ವಯಂ ಚಾಲಿತಗೊಳಿಸುವ ಈ ಯೋಜನೆಗಳ ವೆಚ್ಚ ರೂ.148 ಕೋಟಿಯಾಗಿದ್ದು, ಇದನ್ನು 2017 ರ ಒಳಗೆ ಪೂರ್ಣಗೊಳಿಸಲಾಗುತ್ತದೆ.

ಬೃಹತ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನೆ

ನಗರಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ 8 ಸ್ಥಳೀಯ ಸಂಸ್ಥೆಗಳಿಗೆ ನೀರು ಪೂರೈಕೆ ಮತ್ತು ಒಳಚರಂಡಿ ಕಲ್ಪಿಸುವ ಸಲುವಾಗಿ ಕರ್ನಾಟಕ ಸರ್ಕಾರವು 2007ರ ಡಿಸೆಂಬರ್ ನಲ್ಲಿ ಈ ಯೋಜನೆಗೆ ಅನುಮತಿ ನೀಡಿತ್ತು. ಈ ಯೋಜನೆಯಲ್ಲಿ 8 ಸ್ಥಳೀಯ ಸಂಸ್ಥೆಗಳ 256 ಚ.ಕಿ.ಮೀ. ಪ್ರದೇಶದ 27 ಲಕ್ಷಕ್ಕೂ ಮೇಲ್ಪಟ್ಟ್ಟು ಜನರಿಗೆ 500 ಕೋಟಿ ವೆಚ್ಚದಲ್ಲಿ ಕುಡಿಯುವ ನೀರನ್ನು ಕೊಡಲಾಗಿದೆ. ಈ ಪ್ರದೇಶದಲ್ಲಿ 2713 ಕಿ.ಮೀ ವಿತರಣಾ ಜಾಲವನ್ನು(100 ರಿಂದ 150 ಎಂಎಂ ವ್ಯಾಸದ), 195 ಕಿ.ಮೀ. ಫೀಡರ್ ಮೈನ್ (200 ರಿಂದ 450 ಎಂಎಂ ವ್ಯಾಸ) ಹಾಗೂ 85 ಕಿ.ಮೀ. ಉದ್ದದ ಟ್ರಂಕ್ ಮೈನ್ ಗಳು( 600 ರಿಂದ 1300 ಎಂಎಂ ವ್ಯಾಸ) ಅವುಗಳನ್ನು ನಿರ್ಮಿಸಲಾಗಿದೆ. 1.35 ಲಕ್ಷ ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 2012ಕ್ಕೆ ಬಹುತೇಕ ಯೋಜನಾ ಕಾರ್ಯ ಮುಕ್ತಾಯಗೊಂಡಿದೆ.

ನೀರು ಪೂರೈಕೆ ಸುಧಾರಣಾ ಕಾಮಗಾರಿಗಳು

ನೀರಿನ ಸಮರ್ಪಕ ಲೆಕ್ಕಹಿಡುವುದು, ಸೋರಿಕೆ ತಡೆಗಟ್ಟುವುದು, ಅದರೊಂದಿಗೆ ನೀರು ಪೂರೈಕೆಯನ್ನು ಸುಧಾರಿಸುವುದು, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ತಗ್ಗಿಸುವುದು ಹಾಗೂ ಸೋರಿಕೆ ತಡೆಗಟ್ಟುವ ಮೂರು ಪ್ರಮುಖ ಕಾಮಗಾರಿಗಳನ್ನು ನಗರದ ಹೃದಯ ಭಾಗದ(133 ಚ.ಕಿ.ಮೀ.) ಶೇ.50 ಭಾಗದಲ್ಲಿ ತೆಗೆದುಕೊಳ್ಳಲಾಗಿದೆ. ಒಟ್ಟಾರೆಯಾಗಿ ಇದರ ಉದ್ದೇಶ ನೀರಿನ ಸೋರಿಕೆಯನ್ನು ಶೆ.16ಕ್ಕೆ ಇಳಿಸುವುದಾಗಿದೆ. ಒಟ್ಟಾರೆ ರೂ.655 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಯೋಜನಾ ಪ್ರದೇಶದಲ್ಲಿ 3325 ಕಿ.ಮೀ ಉದ್ದದ ಮಾರ್ಗದಲ್ಲಿ 3 ಲಕ್ಷ ನೀರಿನ ಸಂಪರ್ಕಗಳನ್ನು ಪರಿಶೀಲಿಸಲಾಗುತ್ತದೆ. ಕಾಮಗಾರಿ 2017ಕ್ಕೆ ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗುತ್ತದೆ. ಈ ಯೋಜನೆಗಳ ಲಾಭಗಳೆಂದರೆ ನೀರಿನ ಪೂರೈಕೆ ಅವಧಿಯಲ್ಲಿ ಸುಧಾರಣೆ, ನೀರಿನ ಒತ್ತಡ, ಸ್ವತ್ತಿನ ಸ್ಥಿತಿ ಮತ್ತು ಒತ್ತಡ ಸುಧಾರಣೆ, ನೀರಿನ ಗುಣಮಟ್ಟ ಸುಧಾರಣೆ, ಗ್ರಾಹಕರಿಂದ ಬರುವ ದೂರುಗಳನ್ನು ಕಡಿಮೆ ಮಾಡುವುದು, ಒಟ್ಟಾರೆಯಾಗಿ ನೀರಿನ ಲೆಕ್ಕ ಮತ್ತು ಆದಾಯದ ಹೆಚ್ಚಳ ಮಾಡುವುದು.

ವಿಶೇಷವಾದಂತ ಸೋರಿಕೆ ಪತ್ತೆ ಹಚ್ಚುವ ಕಾಮಗಾರಿಗಳು.

  • ಬೆಂಗಳೂರು (ಪೂರ್ವ-1) ರಲ್ಲಿ ನೀರಿನ ಸೋರಿಕೆ ನಿಯಂತ್ರಣದ ಮೇಲೆ ನಿಗ ಇಡಲು ಜಪಾನಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.
  • ಜೈಕಾ ಅನುದಾನ & ಎಂಆರ್
  • ಐ ತಂತ್ರಜ್ಞಾನದೊಂದಿಗೆ ಕೈಗೆತ್ತಿಕೊಳ್ಳಲಾಗಿದೆ.
  • ಅಗತ್ಯ ಸಾಧನ ಸಲಕರಗಳು ಜಪಾನ್
  • ನಿಂದ ಬಂದಿವೆ(ಉಚಿತವಾಗಿ)
  • ಎಲ್-ಸೈನ್ ಲಿಕೇಜ್ ಮಾನಿಟರಿಂಗ್ ಟೆಕ್ನಾಲಜಿ ಸಿಸ್ಟಂಅನ್ನು ಸ್ಯೂಡೋ ಟೆಕ್ನಿಕಲ್ ಸರ್ವಿಸ್ ಮೂಲಕ ಅಳವಡಿಸಿಕೊಳ್ಳಲಾಗಿದೆ.
  • ಕಳೆದ ಒಂದು ವರ್ಷದಿಂದ ಕೆಲಸ ನಡೆಯುತ್ತಿದೆ.
  • ಪ್ರಸ್ತುತ ಯು.ಎಫ್.ಡಬ್ಲ್ಯೂ. ಯೋಜನೆ ವ್ಯಾಪ್ತಿಗೆ ಒಳಪಡದ ನಾಲ್ಕು ಉಪವಿಭಾಗ ಪ್ರದೇಶಗಳಲ್ಲಿ ಹೀಲಿಯಂ ಗ್ಯಾಸ್ ಆಧಾರಿತ ಗೋಚರಿಸದ ಸೋರಿಕೆಯ ಪತ್ತೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
  • ನಾಲ್ಕು ಉಪವಿಭಾಗಗಳಲ್ಲಿ ರೂ.25 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ.
  • ಫಲಿತಾಂಶ ಆಶಾದಾಯಕವಾಗಿದ್ದು ಸೋರಿಕೆ ಪತ್ತೆ ಹಚ್ಚಲಾಗಿದೆ.

ಕರ್ನಾಟಕ ಪುರಸಭಾ ಪ್ರದೇಶ ಸುಧಾರಣಾ ಯೋಜನೆ(ಕೆಎಂಆರ್ ಪಿ)

ಹೊಸದಾಗಿ ಮಹಾನಗರಕ್ಕೆ ಸೇರ್ಪಡೆಯಾಗಿರುವ 8 ನಗರಸಭೆ ಪ್ರದೇಶಗಳಿಗೆ ಒಳಚರಂಡಿ ಸೌಲಭ್ಯ ವಿಶ್ವ ಬ್ಯಾಂಕ್ ಆರ್ಥಿಕ ನೆರವಿನ ಕೆಎಂಆರ್ ಪಿ & ಎಟಿಓUಖಒ Sಯೋಜನೆಗಳ ಅಡಿ ಒಳಚರಂಡಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಕಾಮಗಾರಿಗಳು 2010ರ ಫೆಬ್ರವರಿ ತಿಂಗಳಿಂದ ಆರಂಭವಾಗಿವೆ. ಯೋಜನಾ ವೆಚ್ಚ- ರೂ.1192 ಕೋಟಿ. ಒಳಚರಂಡಿ ಕಾಮಗಾರಿ 2000 ಕಿ.ಮೀ ಅಡ್ಡ ಕೊಳವೆ ಮಾರ್ಗ ಮತ್ತು 300 ಕಿ.ಮೀ ಸಬ್ ಮೇನ್ ಗಳು /ಮೇನ್ ಗಳನ್ನು ಒಳಗೊಂಡಿದೆ. ಕಾಮಗಾರಿಯು ಕತ್ತರಿಸಲಾದ/ ಹಾನಿಗೊಳಗಾದ ರಸ್ತೆ ಪುನರ್ ನಿರ್ಮಾಣವನ್ನೂ ಒಳಗೊಂಡಿರುತ್ತದೆ. ಕಾಮಗಾರಿಗಳನ್ನು 24 ಪ್ಯಾಕೇಜ್ ಗಳಲ್ಲಿ ತೆಗೆದುಕೊಳ್ಳಲಾಗಿದೆ. ಶೇ.95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 2016ರ ಮಾರ್ಚಿ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ.

ಕೊಳಗೇರಿ ಅಭಿವೃದ್ದಿ ಘಟಕ

ಜೈಕಾ ನೇರವಿನ ಯೋಜನೆಯಲ್ಲಿ 2 ಹಂತಗಳಲ್ಲಿ ಬೆಂಗಳೂರು ನಗರದ ಕೊಳಗೇರಿಗಳಿಗೆ ನೀರು ಪೂರೈಕೆ ಮತ್ತು ಒಳಚರಂಡಿ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಗುರುತಿಸಲಾಗಿರುವ ಕೊಳಗೇರಿಗಳ ಸಂಖ್ಯೆ 362, ಒಂದು ಮತ್ತು ಎರಡನೇ ಹಂತ ಯೋಜನಗೆಗಳಲ್ಲಿ ಅನುಕ್ರಮವಾಗಿ 96 ಮತ್ತು 68 ಕೊಳಗೇರಿಗಳ ಕಾಮಗಾರಿಯನ್ನು ರೂ. 91 ಕೋಟಿಗಳ ವೆಚ್ದದಲ್ಲಿ ಕೈಗೆತ್ತಿಕೊಂಡಿದ್ದು, ಪ್ರತಿ ವ್ಯಯಕ್ತಿಕ ಮನೆಗಳಿಗೆ ಎಂಡಿಪಿಇ ಕೊಳವೆಗಳ ಮೂಲಕ ನೀರಿನ ಸಂಪರ್ಕ ಹಾಗೂ ಹೆಚ್ಡಿಪಿಇ ಕೊಳವೆಗಳ ಮೂಲಕ ಒಳಚರಂಡಿ ಸಂಪರ್ಕಗಳನ್ನು ಕಲ್ಪಿಸುವುದು ಮತ್ತು ಸಗಟಾಗಿ ನೀರು ಪೂರೈಕೆ ಮತ್ತು ತ್ಯಾಜ್ಯ ನೀರಿನ ವಿಲೇವಾರಿಯನ್ನು ಈ ಯೋಜನೆ ಒಳಗೊಂಡಿರುತ್ತದೆ.ಮೊದಲನೇ ಹಂತದ ಯೋಜನೆಯನ್ನು ಶೆ.100ರಷ್ಟು ಪೂರ್ಣಗೊಳಿಸಲಾಗಿದೆ. ಎರಡನೇ ಹಂತದ ಯೋಜನೆ ಶೆ.90 ರಷ್ಟು ಪೂರ್ಣಗೊಂಡಿದೆ.

ಒಳಚರಂಡಿ ಕಾಮಗಾರಿಗಳು

ಕಾವೇರಿ 4ನೇ ಹಂತ 2ನೇ ಘಟ್ಟ ಯೋಜನೆಯ ಕಾಂಟ್ರಕ್ಟ್ 7ನೇ ಪ್ಯಾಕೇಜ್ ನಲ್ಲಿ 339 ದ.ಲ.ಲೀ ಸಾಮಥ್ರ್ಯದ 11 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ವಿವಿಧ ಸ್ಥಳಗಳಲ್ಲಿ ಸ್ಥಾಪಿಸುವುದು. ಹಾಲಿ ಇರುವ ಒಳಚರಂಡಿ ಮಾರ್ಗಗಳನ್ನು ಬದಲಿಸಿ ಪುನರ್ ನಿರ್ಮಾಣ ಮಾಡುವುದು( ಪ್ಯಾಕೇಜ್ 10- 45 ಕಿ.ಮೀ). ಕಾವೇರಿ ನೀರು ಪೂರೈಕೆ ಯೋಜನೆಯ ಕಾವೇರಿ 4ನೇ ಹಂತ 2ನೇ ಘಟ್ಟ ಯೋಜನೆಯಲ್ಲಿ 2 ಐಎಸ್ಪಿಎಸ್ ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ- ಸಾರಕ್ಕಿಯಲ್ಲಿ 20 ಎಂಎಲ್ಡಿ ಸಾಮಥ್ರ್ಯದ ಐಎಸ್ಪಿಎಸ್ ಮತ್ತು ಅಗರದಲ್ಲಿ 120 ಎಂಎಲ್ಡಿ ಸಾಮಥ್ರ್ಯದ ಐಎಸ್ಪಿಎಸ್ ಸ್ಥಾಪನೆ ಒಳಗೊಂಡಿದೆ.. ಈ ಯೋಜನೆಗಳನ್ನು 2016ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಕೋರಮಂಗಳ ಮತ್ತು ಚಲಘಟ್ಟ ಕಣಿವೆಗಳಲ್ಲಿ 60 ದ.ಲ.ಲೀ ಸಾಮಥ್ರ್ಯದ ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ನಿರ್ಮಾಣ ಕಾರ್ಯವನ್ನು 2016 ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಬೆಳ್ಳಂದೂರು ಬಳಿ 90 ಎಂಎಲ್ಡಿ ಸಾಮಥ್ರ್ಯದ ಸಂಸ್ಕರಣಾ ಘಟಕದ ಕಾರ್ಯ ನಿರ್ಮಾಣ ಹಂತದಲ್ಲಿದ್ದು ಇದನ್ನೂ ಸಹ 2016ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ . ವಿಶ್ವ ಬ್ಯಾಂಕ್ ನೆರವಿನಡಿ ಕೆಎಂಆರ್ಪಿ ಯೋಜನೆಯಲ್ಲಿ ಬೊಮ್ಮನಹಳ್ಳಿ ನಗರ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಪರಿಸರ ಕ್ರಿಯಾ ಯೋಜನೆಗಳು

ತ್ಯಾಜ್ಯ ನೀರು ಮಳೆನೀರು ಕಾಲುವೆಗಳಲ್ಲಿ ಹರಿಯುವುದನ್ನು ತಪ್ಪಿಸಲು ಮಂಡಳಿಯು ಕೆಳಗಿನ ಯೋಜನೆಗಳನ್ನು ಕೈಗೊಂಡಿದೆ.

  • ಪರಿಸರ ಕ್ರಿಯಾ ಯೋಜನೆ (ಇಎಪಿ)-ಎ
  • 2001ರಲ್ಲಿ ಆರಂಭಿಸಿದ್ದು 33 ಕಿ.ಮೀ., ಉದ್ದದ ಬೃಹತ್ ತ್ಯಾಜ್ಯ ನೀರು ಮಾರ್ಗವನ್ನು (ಸಿವರ್ ಟ್ರಂಕ್) ಬದಲಿಸಿ ಪುನರ್ ನಿರ್ಮಾಣ ಮಾಡುವ ಕಾಮಗಾಗಿರಯನ್ನು 54.00ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದರಿಂದಾಗಿ ಸಂಸ್ಕರಣಾ ಘಟಕಗಳಿಗೆ ಹರಿಸುವ ತ್ಯಾಜ್ಯ ನೀರಿನ ಪ್ರಮಾಣ 40 ದ.ಲ.ಲೀ., ಯಷ್ಟು ಹೆಚ್ಚಿದ್ದು ಮಳೆ ನೀರು ಕಾಲುವೆಗಳಲ್ಲಿ ಹರಿಯುವ ತ್ಯಾಜ್ಯ ನೀರಿನ ಪ್ರಮಾಣ ಕಡಿಮೆಯಾಗಿದೆ.

ಹೆಬ್ಬಾಳದ ಸೊನ್ನೆ ಹರಿವು ಯೋಜನೆ:-

ಈ ಯೋಜನೆಯಲ್ಲಿ 18 ಕಿ.ಮೀ. ಉದ್ದದ ಟ್ರಂಕ್ ಸಿವರ್ ಗಳನ್ನು ರೂ.48 ಕೋಟಿ ವೆಚ್ಚದಲ್ಲಿ ಬದಲಿಸಿ ಪುನರ್ ಸ್ಥಾಪನೆ ಮಾಡಲಾಗಿದೆ. ಈ ಯೋಜನೆಯ ಲಾಭವೇನೆಂದರೆ ನಾಗವಾರ ಕೆರೆಯವರೆಗೆ ಮಳೆ ನೀರು ಕಣಿವೆಗಳಲ್ಲಿ ತ್ಯಾಜ್ಯ ನೀರಿನ ಹರಿವನ್ನು ಸಂಪೂರ್ಣ ಶೂನ್ಯಗೊಳಿಸಲಾಗಿದೆ. ನಗರ ಹೃದಯ ಭಾಗದಿಂದ ಹೆಬ್ಬಾಳ ಮತ್ತು ನಾಗವಾರ ಕೆರೆಗಳಿಗೆ ತ್ಯಾಜ್ಯ ನೀರಿನ ಪ್ರವೇಶ ನಿಲ್ಲಿಸಲಾಗಿದೆ.

ಹೆಬ್ಬಾಳದ ಸಂಸ್ಕರಣ ಘಟಕವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆಮಾಡುತ್ತಿದ್ದು, ಈ ಘಟಕಕ್ಕೆ ದಿನಂಪ್ರತಿ 40 ದ.ಲ.ಲೀ., ಅಷ್ಟು ಹೆಚ್ಚುವರಿ ತ್ಯಾಜ್ಯ ನೀರು ಹರಿದು ಬರುತ್ತಿದೆ.

ಪರಿಸರ ಕ್ರಿಯಾ ಯೋಜನೆ( ಇಏಪಿ)-ಬಿ

ಈ ಯೋಜನೆಯಲ್ಲಿ 70 ಕಿ ಮೀ ಉದ್ದದ ಟ್ರಂಕ್

ಸಿವರ್ ಅನ್ನು ರೂ 176 ಕೋಟಿ ವೆಚ್ಚದಲ್ಲಿ ಅನ್ನು ಬದಲಿಸಿ ಪುನರ್ ಸ್ಥಾಪನೆ ಮಾಡುವ ಕಾಮಗಾರಿಗಳನ್ನು ಒಳಗೊಳ್ಳಲಾಗಿದೆ.. ಈ ಯೋಜನೆ ಪೂರ್ಣಗೊಂಡಾಗ ದಿನಂಪ್ರತಿ ಸುಮಾರು 150 ದ ಲ ಲೀ ತ್ಯಾಜ್ಯ ನೀರನ್ನು ಸಂಸ್ಕರಣಾ ಘಟಕಗಳಿಗೆ ರವಾನಿಸಬಹುದು ಎಂದು ಅಂದಾಜಿಸಲಾಗಿದೆ. ಈ ಯೋಜನೆಯ ಪರಿಷ್ಕøತ ವೆಚ್ಚ 495 ಕೋಟಿ. ಯೋಜನೆ 2016ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಉದ್ದೇಶಿತ ನೀರು ಪೂರೈಕೆ ಯೋಜನೆಗಳು

ಕಳೆದ 2 ದಶಕಗಳಲ್ಲಿ ಬೆಂಗಳೂರು ನಗರವು ಕೈಗಾರಿಕೆ ಮತ್ತು ವಾಣಿಜ್ಯ ವಲಯಗಳಲ್ಲಿ ಅಗಾದ ಪ್ರಮಾಣದಲ್ಲಿ ಬೆಳೆದಿದೆ. ಪರಿಣಾಮ ನಗರ ಚಟುವಟಿಕೆಗಳು ಅನಿಯಮಿತವಾಗಿ ಬೆಂಗಳೂರಿನ ಸುತ್ತ ಮುತ್ತ ಹೆಚ್ಚಾಗಿದ್ದು ಜನಸಂಖ್ಯೆ ಮತ್ತು ನಿರ್ವಹಣಾ ಚಟುವಟಿಕೆಗಳೂ ಸಹ ಹೆಚ್ಚಾಗಿವೆ. 1991 ರ ಜನಗಣತಿಯಂತೆ ಬೆಂಗಳೂರು ಜಲಸಂಖ್ಯೆ 4.08 ದಶಲಕ್ಷ, 2001 ರಲ್ಲಿ 5.8 ದಶ ಲಕ್ಷ ಆದರೆ 2011 ರಲ್ಲಿ 8.5 ದಶಲಕ್ಷಕ್ಕೆ ಹೆಚ್ಚಿದೆ. ಈ ಒಂದು ಆಕಸ್ಮಿಕ ಜನಸಂಖ್ಯಾ ಸ್ಪೋಟ ಮೂಲಸೌಕರ್ಯಗಳ ಮೇಲೆ ಅದರಲ್ಲೂ ವಿಶೇಷವಾಗಿ ಕುಡಿಯುವ ನೀರು ಮತ್ತು ಒಳಚರಂಡಿ ಮಾರ್ಗಗಳ ಮೇಲೆ ಹೆಚ್ಚಿನ ಒತ್ತಡವನ್ನು ನಿರ್ಮಿಸಿದೆ. ನಗರದ ಭವಿಷ್ಯದ ನೀರಿನ ಬೇಡಿಕೆ ಅಗಾದ ಪ್ರಮಾಣದ್ದಾಗಿದ್ದು, ಸಂಭವನೀಯ ಜನಸಂಖ್ಯೆ ಮತ್ತು ನೀರು ಪೂರೈಕೆ ಬೇಡಿಕೆಗಳನ್ನು ಕೆಳಗಿನ ಪಟ್ಟಿಯಲ್ಲಿ ತೋರಿಸಲಾಗಿದೆ.

ಟೆಬಲ್ :4 ಜನಸಂಖ್ಯೆ ಮತ್ತು ನೀರು ಪೂರೈಕೆ ಅಗತ್ಯಗಳು

 
ವರ್ಷ ಜನಸಂಖ್ಯೆ (ದಶ ಲಕ್ಷ) ನೀರಿನ ಬೇಡಿಕೆ(ದ.ಲ.ಲೀ) ನೀರಿನ ಬೇಡಿಕೆ(ಟಿಎಂಸಿ) ಪ್ರಸ್ತುತ ಪೂರೈಕೆ(ದ.ಲ.ಲೀ) ಬೇಡಿಕೆಯಲ್ಲಿನ ಕೊರತೆ
ದಲಾಲೀ ಟಿಎಂಸಿ ದಲಾಲೀ ಟಿಎಂಸಿ
2011 8.499 1400 18.05 950 12.25 450 5.80
2021 10.581 2100 27.1 1450 6.7 650 0.4
2031 14.296 2900 53.90 1450 37.39 1450 16.51
2041 17.085 3400 72.40 1450 43.84 1950 28.56
2051 20.561 4100 88.25 1450 52.86 2650 35.39

ನಗರದ ಹೃದಯ ಭಾಗ ಮತ್ತು 8 ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ ಇದೆಯಾದರೂ 110 ಗ್ರಾಮ ಪ್ರದೇಶಗಳಲ್ಲಿ ಸಮಗ್ರ ನೀರು ಮತ್ತು ಒಳಚರಂಡಿ ವ್ಯವಸ್ಥೆ ಇರುವುದಿಲ್ಲ. 110 ಗ್ರಾಮಗಳಲ್ಲಿ ಕೊಳವೆ ಬಾವಿಗಳೇ ನೀರಿನ ಮೂಲಗಳಾಗಿವೆ. ಈ ಪ್ರದೇಶಗಳಲ್ಲಿ ಈಗ ಬೇಡಿಕೆ ಹೆಚ್ಚಾಗಿದ್ದು, ವಿಶ್ವಾಸರ್ಹವಾದ ಮತ್ತು ವ್ಯವಸ್ಥಿತವಾದ ನೀರು ಪೂರೈಕೆ ವ್ಯವಸ್ಥೆ ಅಗತ್ಯವಾಗಿದೆ. ಈ ಪ್ರದೇಶದಲ್ಲಿ ಯೋಜಿತವಾದ ಒಳಚರಂಡಿ ವ್ಯವಸ್ಥೆಯೂ ಇಲ್ಲ. ಪ್ರಸ್ತುತ ಪ್ರತಿ ಮನೆಗಳಿಗೂ ಸೆಪ್ಟಿಕ್ ಟ್ಯಾಂಕ್ಗಳು, ಸೋಕ್ ಪಿಟ್ಗ ಳನ್ನು ನೈರ್ಮಲ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ತ್ಯಾಜ್ಯದ ನೀರನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಮತ್ತು ಸಂಸ್ಕರಿಸುವ ವ್ಯವಸ್ಥೆ ಇರುವುದಿಲ್ಲ.(ಕೆಲವು ಬಡಾವಣೆಗಳನ್ನು ಹೊರತು ಪಡಿಸಿ). ವ್ಯವಸ್ಥಿತವಾದ ಒಳಚರಂಡಿ ವ್ಯವಸ್ಥೆಇಲ್ಲದ ಕಾರಣ ವಿವಿಧ ವಾರ್ಡ್ ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರು ತೆರೆದ ಚರಂಡಿಗಳಿಗೆ ಹರಿದು ಬರುತ್ತಿದ್ದು, ಅವು ಕೆರೆಗಳು ಮತ್ತು ಜಲಾಶಯಗಳನ್ನು ಸೇರುವುದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.2007 ರಲ್ಲಿ ಬೃಹತ್ ಮಹಾನಗರ ಪಾಲಿಕೆ ರಚಿತವಾದ ನಂತರ 110 ಗ್ರಾಮಗಳಲ್ಲಿ ತೀವ್ರಗತಿಯಲ್ಲಿ ಬೆಳವಣಿಗೆಯಾಗಿದ್ದು, ಅಭಿವೃದ್ದಿಯ ಜೊತೆ ಜೊತೆಗೆ ಜನಸಂಖ್ಯೆ ಸಹ ಹೆಚ್ಚಿದೆ. ತ್ವರಿತವಾಗಿ ಬೆಳೆದಿರುವ ಈ ಪ್ರದೇಶಗಳಿಗೆ ಕುಡಿಯುವ ನೀರು, ಒಳಚರಂಡಿ, ರಸ್ತೆ ಮುಂತಾದ ನಗರ ಮೂಲ ಸೌಕರ್ಯಗಳ ಅಗತ್ಯ ಹೆಚ್ಚಿದೆ. ಮಹಾನಗರ ಪಾಲಿಕೆ ವಿಸ್ತರಿಸಿದ ಪ್ರದೇಶಗಳು ಸೇರಿದಂತೆ ನಗರಕ್ಕೆ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿ ಬೆಂಗಳೂರು ಜಲಮಂಡಳಿಯದಾಗಿದೆ.

ಕಾವೇರಿ 5 ನೇ ಹಂತದ ಯೋಜನೆಗೆ ಸಗಟು ನೀರು ಪೂರೈಕೆ

ಇತ್ತೀಚೆಗೆ ಕರ್ನಾಟಕ ಸರ್ಕಾರದ ನಗರಾಭಿವೃದ್ದಿ ಇಲಾಖೆಯು ಬೆಂಗಳೂರು ನಗರಕ್ಕೆ 10 ಟಿಎಂಸಿ(ದಿನಂ ಪ್ರತಿ 775 ದ.ಲ.ಲೀ.,) ನೀರನ್ನು ನಿಗಧಿಗೊಳಿಸಿದೆ. ಬೆಂಗಳೂರು ನಗರಕ್ಕೆ ಕಾವೇರಿ 5ನೇ ಹಂತದ ಯೋಜನೆಯನ್ನು ನಿರ್ಮಿಸಲು ಮತ್ತು ಇದಕ್ಕೆ ಜೈಕಾ (ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ)ದಂತಹ ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆಯುವ ಉದ್ದೇಶದಿಂದ ಸವಿವರವಾದ ಯೋಜನಾವರದಿಯನ್ನು ಸಿದ್ದಪಡಿಸಲಾಗಿದೆ. ತಾಂತ್ರಿಕ ವಿಷಯಗಳು ಮತ್ತು ನೀರಿನ ಬೇಡಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾವೇರಿ 5ನೇ ಹಂತದ ಯೋಜನೆಯನ್ನು 2 ಹಂತಗಳಲ್ಲಿ ಅಂದರೇ ಮೊದಲನೇ ಹಂತದಲ್ಲಿ 500 ದ.ಲ.ಲೀ., (6.45 ಟಿಎಂಸಿ) ಸಾಮಥ್ರ್ಯದ, 2ನೇಹಂತದಲ್ಲಿ 275 ದ.ಲಾ.ಲೀ., (3.55 ಟಿಎಂಸಿ) ಸಾಮಥ್ರ್ಯದ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. 850 ದ.ಲಾ.ಲೀ ಸಾಮಥ್ರ್ಯದ ಕಚ್ಚಾ ನೀರು ಕೊಳವೆ ಮಾರ್ಗಗಳನ್ನು ನಿರ್ಮಿಸಲು ಟಿ.ಕೆ.ಹಳ್ಳಿಯಲ್ಲಿ ಕನಿಷ್ಠ 500 ದ.ಲ.ಲೀ., ಯಷ್ಟು ಸಂಸ್ಕರಿಸಿ ಶುದ್ದ ನೀರು ಒದಗಿಸುವ ಶುದ್ಧೀಕರಣ ಘಟಕ ಮತ್ತು 775 ದ.ಲಾ.ಲೀ., ಸಾಮಥ್ರ್ಯದ ವಿವಿಧ ಯೋಜನೆಗಳಿಗೆ ಬಳಕೆಯಾಗುವ (ಏರೇಟರ್, ಕಚ್ಚಾನೀರು ಕೊಳವೆ ಮತ್ತು ಎಲ್ಲಾ ಕಟ್ಟಡಗಳು) ವ್ಯವಸ್ಥೆ, 3 ಸ್ಥಳಗಲ್ಲಿರುವ (ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗೋಣಿ) ಶುದ್ಧೀಕರಿಸಿದ ನೀರನ್ನು ಪಂಪಿಂಗ್ ಸ್ಥಾವರಗಳಲ್ಲಿ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರೀಕಲ್ ಕೆಲಸಗಳು, ನಗರ ಪ್ರವೇಶದ (ವಜರಹಳ್ಳಿ) ವರೆಗೆ ಶುದ್ಧೀಕರಿಸಿದ ನೀರನ್ನು 750 ದ.ಲಾ.ಲೀ., ವರೆಗೆ ಹರಿಸುವ ಪ್ರಸರಣ ಮಾರ್ಗ ಮತ್ತು ನಗರದಲ್ಲಿ ಟ್ರಂಕ್ ಮೈನ್ಗಳು ಮತ್ತು ಜಲಾಗಾರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

110 ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ

ಮಹಾನಗರ ಪಾಲಿಕೆಯ ವಿಸ್ತರಿಸಿದ ಪ್ರದೇಶಗಳಾದ 110 ಗ್ರಾಮಗಳಿಗೆ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡಲು ಯೋಜನೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಯೋಜನಾ ಪ್ರದೇಶದ ವ್ಯಾಪ್ತಿಯು 225 ಚ.ಕಿ.ಮೀ. ಗಳಾಗಿದೆ. ನಗರದ 110 ಗ್ರಾಮಗಳಿಗೆ ನೀರು ಮತ್ತು ಒಳಚರಂಡಿಯಂತಹ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಈ ಯೋಜನೆಗಳನ್ನು ಅದಷ್ಟು ಬೇಗ ಕೈಗೊಳ್ಳಬೇಕಾಗಿದೆ. 5 ವಲಯಗಳಿಗೆ ಸಂಬಂಧಿಸಿದಂತೆ (ದಾಸರಹಳ್ಳಿ, ರಾಜಾಜೀನಗರ, ಬೊಮ್ಮನಹಳ್ಳಿ, ಮಹಾದೇವನಾಪುರ & ಬ್ಯಾಟರಾಯನಪುರ) ಸಿಪಿಹೆಚ್ಇಇಓ ಮಾರ್ಗ ಸೂಚಿಯಂತೆ 2011ರ ಜನಗಣತಿ ಆಧರಿಸಿ ಮತ್ತು 2034 ಹಾಗೂ ಅಂತಿಮವಾಗಿ 2049ರ ವೇಳೆಗೆ ಈ ಪ್ರದೇಶದಲ್ಲಿ ಸಂಭಾವನೀಯ ಜನಸಂಖ್ಯೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಸಿದ್ದಪಡಿಸಲಾಗಿದೆ. ಈ 5 ವಲಯಗಳ ಯೋಜನಾ ವೆಚ್ಚ 2014-15ರ ಜಲಮಂಡಳಿಯ ಎಸ್ ಆರ್ (ಷೆಡ್ಯೂಲ್ ಆಫ್ ರೇಟ್ಸ್) ಕೆಯುಡಬ್ಲ್ಯೂಎಸ್&ಡಿಬಿ, ಪಿಡಬ್ಲ್ಯೂಡಿ ಹಾಗೂ ಇಂಡಿಯನ್ ಎಸ್ ಟಿ ಇವುಗಳ ಆಧಾರದ ಮೇಲೆ 5018.38 ಕೋಟಿ ಆಗಲಿದೆ. . ಯೋಜನಾ ವರದಿಯ ಪ್ರಸ್ತಾವನೆಯಲ್ಲಿ ನೀರು ಪೂರೈಕೆಗೆ ಸಂಬಂಧಿಸಿದಂತೆ ವಿತರಣಾ ವ್ಯವಸ್ಥೆ 100 ರಿಂದ 600 ಎಂಎಂ ವ್ಯಾಸದ ಫೀಡರ್ ಮೈನ್ಗಳು, 711 ಎಂಎಂ ಮತ್ತು ಅದಕ್ಕೂ ಮೇಲ್ಪಟ್ಟು ಗಾತ್ರದ ಡಿಐ ಪೈಪುಗಳು, ಎಂಎಸ್ ಪೈಪ್ ಗಳು, ಸಂಪುಗಳು ಮತ್ತು ಪಂಪ್ಹೌಸ್ ಗಳು ಮತ್ತು ವಿವಿಧ ಗಾತ್ರದ ಅಂದರೇ 1.5 ಲಕ್ಷದಿಂದ 2.5 ಲಕ್ಷ ಸಾಮಥ್ರ್ಯದ ವಿವಿಧ ಗಾತ್ರದ ಓವರ್ ಹೇಡ್ ಟ್ಯಾಂಕ್ಗಳು, ಅಗತ್ಯವಿರುವೆಡೆ ಜಲಾಗಾರ ನಿರ್ಮಾಣ, ಮೇಲ್ವಿಚಾರಣಾ ನಿಯಂತ್ರಣ ಮತ್ತು ಮಾಹಿತಿ ಪಡೆಯಲು ಇರುವಂತಹ ಸ್ಕಾಡ ವ್ಯವಸ್ಥೆಯನ್ನು ಒಳಗೊಂಡಿದೆ. ಒಳಚರಂಡಿ ವ್ಯವಸ್ಥೆಗಳು 200 ಎಂಎಂ ವ್ಯಾಸದ ಅಡ್ಡಮಾರ್ಗಗಳು ಗ್ಲೇಜ್ಡ್ ಸ್ಟೋನ್ವೆ ರ್ ಪೈಪುಗಳು ಮತ್ತು ಸಬ್ ಮೈನ್ಗ ಳು, ಮೈನ್ ಗಳು, 300 ಎಂಎಂ ಮತ್ತು ಮೇಲ್ಪಟ್ಟ ಗಾತ್ರದ ಮೈನ್ ಮತ್ತು ಟ್ರಂಕ್ ಸಿವರ್ಗ ಳು, ಆರ್ಸಿ ಸಿ ಎನ್ ಪಿ-3 ಕ್ಲಾಸ್ ಪೈಪುಗಳು, ಮಧ್ಯಂತರ ತ್ಯಾಜ್ಯ ನೀರು ಪಂಪ್ಮಾ ಡುವ ಪಂಪಿಂಗ್ ಸ್ಟೇಷನ್ಗ ಳು (ಐ.ಎಸ್.ಪಿ.ಎಸ್) 129 ದ.ಲ.ಲೀ ಸಾಮಥ್ರ್ಯದ 16 ತ್ಯಾಜ್ಯ ನೀರು ಸಂಸ್ಕರಣ ಘಟಕಗಳು ಹಾಗೂ ಒಳಚರಂಡಿ ಮಾರ್ಗಗಳನ್ನು ಶುಚಿಗೊಳಿಸುವ ಯಂತ್ರಗಳು ಹಾಗೂ 3 ವರ್ಷಗಳ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ರಸ್ತೆ ಪುನರ್ ನಿರ್ಮಾಣ ಯೋಜನಾ ಭಾಗ- ನೀರು ಮತ್ತು ಒಳಚರಂಡಿ ಮಾರ್ಗಗಳ ಕಾಮಗಾರಿ ಸಂದರ್ಭದಲ್ಲಿ ಹಾನಿಗೊಳಗಾದ ರಸ್ತೆಗಳ ಪುನರ್ ನಿರ್ಮಾಣವನ್ನು ಒಳಗೊಂಡಿರುತ್ತದೆ.

#

ನೀರು ಪೂರೈಕೆ ವ್ಯವಸ್ಥೆಯನ್ನು ಉತ್ತಮ ಪಡಿಸುವ ಯೋಜನೆಗಳು

ಬೆಂಗಳೂರು ಹೃದಯ ಭಾಗದ ಪ್ರದೇಶದಲ್ಲಿ ನೀರು ಪೂರೈಕೆಯ ವ್ಯವಸ್ಥೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ನೀರಿನ ಸಮರ್ಪಕ ಲೆಕ್ಕ ಇಡುವುದು, ಸೋರಿಕೆ ತಡಗಟ್ಟುವುದು, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕಡಿಮೆ ಮಾಡುವುದು, ಸೋರಿಕೆ ನಿಲ್ಲಿಸುವ ನಿಟ್ಟಿನಲ್ಲಿ ಸುಮಾರು ಶೇ.50 ರಷ್ಟು ಪ್ರದೇಶದಲ್ಲಿ (116 ಚ.ಕಿ.ಮೀ) 3 ಪ್ರಮುಖ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಒಟ್ಟಾರೆಯಾಗಿ ನೀರಿನ ನಷ್ಟವನ್ನು ಶೇ.16ಕ್ಕೆ ಇಳಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯಲ್ಲಿ 1220 ಕಿ.ಮೀ., ನಷ್ಟು ಉದ್ದದ ಮಾರ್ಗದಲ್ಲಿ 1.60 ಲಕ್ಷಕ್ಕೂ ಮೇಲ್ಪಟ್ಟು ನೀರಿನ ಸಂಪರ್ಕಗಳನ್ನು ನಿರ್ವಹಣೆ ಮಾಡಬೇಕಾಗಿದೆ. ಒಟ್ಟಾರೆ ಯೋಜನೆಯ ವೆಚ್ಚ 821 ಕೋಟಿಗಳಾಗಿದೆ. ಈ ಕಾಮಗಾರಿಗಳ ಲಾಭವೆನೆಂದರೆ:- ಪೂರೈಕೆ ಅವಧಿಯಲ್ಲಿ ಹೆಚ್ಚಳ, ನೀರಿನ ಒತ್ತಡ ಮತ್ತು ಸ್ವತ್ತಿನಲ್ಲಿ ಸುಧಾರಣೆ, ನೀರಿನ ಗುಣಮಟ್ಟ ಸುಧಾರಣೆ, ಗ್ರಾಹಕರ ದೂರಿನ ಪ್ರಮಾಣ ಇಳಿಕೆ, ಒಟ್ಟಾರೆ ಪೂರೈಕೆಯಾಗುವ ನೀರಿನ ಲೆಕ್ಕ ಹಾಗೂ ಆದಾಯದಲ್ಲಿ ಸುಧಾರಣೆ.

ಉದ್ದೇಶಿತ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗಳು

ತ್ಯಾಜ್ಯ ನೀರನ್ನು ಸಮರ್ಪಕವಾಗಿ ಸಾಗಿಸುವ ಸಲುವಾಗಿ ಪರಿಸರ ಕ್ರಿಯಾ ಯೋಜನೆ -ಸಿ ಯಲ್ಲಿ ಹಾಲಿ ಇರುವ 300 ಕಿ.ಮೀ ಉದ್ದದ ಟ್ರಂಕ್ ಸೀವರ್ನ ಪೈಕಿ ಬಾಕಿ ಉಳಿದಿರುವ 74 ಕಿ.ಮೀ ಕಾಮಗಾರಿ ಯೋಜನೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಪ್ರಸ್ತುತದ ಕೊಳವೆ ಮಾರ್ಗದ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಲಿ ಸಂಭವಿಸುವ ಎಲ್ಲ ಸಮಸ್ಯೆಗಳನ್ನು ನಿಯಂತ್ರಿಸುವ ಸಲುವಾಗಿ ವಿಸೃತ ಯೋಜನೆಯನ್ನು ಸಿದ್ದಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. ವಿಸೃತ ಯೋಜನೆಯನ್ನು ಸಿದ್ದಪಡಿಸಲು ಸರಿಸುಮರು 6 ತಿಂಗಳು ಕಾಲಾವಕಾಶ ಬೇಕಾಗಿದ್ದು, ಈ ಯೋಜನೆಯ ಅಂದಾಜು ವೆಚ್ಚ ಸುಮಾರು 500 ಕೋಟಿಗಳಾಗಿದೆ. ಇದರಿಂದ ಸಂಸ್ಕರಣಾ ಘಟಕಗಳಿಗೆ ಹರಿಯುವ ತ್ಯಾಜ್ಯ ನೀರಿನ ಪ್ರಮಾಣ 120 ಲೀಟರ್ ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ.ಇದಲ್ಲದೇ ಹೆಚ್ಚುವರಿಯಾಗಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಲು 5250 ದ.ಲಾ.ಲೀ ಸಾಮಥ್ರ್ಯದ 6 ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸಹ ಉದ್ದೇಶಿಸಲಾಗಿದೆ. ಈ ಯೋಜನೆಗಳಿಗೆ ವಿಸ್ತøತ ವರದಿ ಸಿದ್ದವಾಗಿದೆ. ಕೆಯುಐಡಿಎಫ್ಸಿ ಸಂಸ್ಥೆಯು ಮೆಘಾ ಚಿಟಿ ಯೋಜನೆಯಡಿ ಯೋಜನಾ ವೆಚ್ಚದ ಶೇ.50 ರಷ್ಟು ಹಣವನ್ನು ಸಾಲ ರೂಪದಲ್ಲಿ ನೀಡಲು ಒಪ್ಪಿದೆ. ಶೆ.25 ರಷ್ಟು ಹಣವನ್ನು ಒದಗಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಉಳಿಕೆ ಶೆ.25 ರಷ್ಟು ಹಣವನ್ನು ಮಂಡಳಿ ಭರಿಸಲಿದೆ. ವಿಸೃತ ಯೋಜನಾ ವರದಿಯಂತೆ ಈ ಯೋಜನೆಗೆ 1373.43 ಕೋಟಿ ವೆಚ್ಚವಾಗಲಿದೆ. ಭವಿಷ್ಯದಲ್ಲಿ ಕೈಗೊಳ್ಳಲಾಗುತ್ತಿರುವ ಸಂಸ್ಕರಣ ಘಟಕಗಳ ಯೋಜನಾವರದಿ ವಿವರ ಈ ಕೆಳಗಿನಂತಿದೆ.

  • ವೃಷಭಾವತಿ ಕಣಿವೆಯಲ್ಲಿ 150 ದ.ಲ.ಲೀ ಸಾಮಥ್ರ್ಯದ ಸಂಸ್ಕರಣಾ ಘಟಕ
  • ಹೆಬ್ಬಾಳ ಕಣಿವೆಯಲ್ಲಿ 100 ದ.ಲ.ಲೀ ಸಾಮಥ್ರ್ಯದ ಸಂಸ್ಕರಣಾ ಘಟಕ
  • ಕೆ.ಆರ್.ಪುರದಲ್ಲಿ 20 ದ.ಲ.ಲೀ ಸಾಮಥ್ರ್ಯದ ಸಂಸ್ಕರಣಾ ಘಟಕ
  • ಕೋರಮಂಗಲ ಮತ್ತು ಚಲಘಟ್ಟ ಕಣಿವೆಯಲ್ಲಿ 150 ದ.ಲ.ಲೀ ಸಾಮಥ್ರ್ಯದ ಸಂಸ್ಕರಣಾ ಘಟಕ
  • ದೊಡ್ಡಬೆಲೆಯಲ್ಲಿ 40 ದ.ಲ.ಲೀ ಸಾಮಥ್ರ್ಯದ ಸಂಸ್ಕರಣಾ ಘಟಕ
  • ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 60 ದ.ಲ.ಲೀ ಸಾಮಥ್ರ್ಯದ ಸಂಸ್ಕರಣಾ ಘಟಕ

ಬೆಳ್ಳಂದೂರು ಮತ್ತು ವರ್ತುರು ಕೆರೆಗಳು ಮಲಿನವಾಗುವುದನ್ನು ತಡೆಗಟ್ಟುವ ಸಲುವಾಗಿ ಹುಳಿಮಾವು, ಸಾರಕ್ಕಿ ಮತ್ತು ಅಗರಂ ಕೆರೆಗಳ ಮೇಲ್ಭಾಗದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೆರೆಗಳ ಸಮೀಪದಲ್ಲಿ ಈ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಅಗತ್ಯವಾದ ಜಾಗವನ್ನು ನೀಡುವಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ಕೆಳಲಾಗಿದೆ. ಈ ಘಟಕಗಳನ್ನು ನಿರ್ಮಿಸಿ ನಿರ್ವಹಿಸಲು 580 ಕೋಟಿ ರೂಗಳು ಅಗತ್ಯವಿದೆ.

ಮಳೆನೀರು ಕೊಯ್ಲು ಮತ್ತು ಕೆರೆಗಳ ಪುನಃಶ್ಚೇತನ

ಜಲಚಕ್ರದಲ್ಲಿ ಮಳೆನೀರು ಮತ್ತು ಅಂತರ್ಜಲ ಬಹು ಮುಖ್ಯವಾದವುಗಳಾಗಿವೆ, ಬೆಂಗಳೂರು ಮಹಾನಗರ ವ್ಯಾಪ್ತಿಯ 1250 ಚ.ಕಿ.ಮೀ ಪ್ರದೇಶದಲ್ಲಿ ವಾರ್ಷಿಕ 750 ಎಂಎಂ ಮಳೆ ಸುಮಾರು 33 ಟಿಎಂಸಿ ನೀರು ಲಭ್ಯವಾಗಲಿದೆ. ಮಹಾನಗರ ಪಾಲಿಕೆಯು ತನ್ನ ಮಳೆನೀರು ಕಾಲುವೆಗಳನ್ನು ಸಂಪೂರ್ಣವಾಗಿ ಪುನರ್ ಶ್ಚೇತನಗೊಳಿಸಿದಲ್ಲಿ ನಗರದ ಒಳಚರಂಡಿ ಜಾಲದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಗೆ ಸಾಗಿ¸ಸುವುದು ಖಾತ್ರಿಯಾದಲ್ಲಿ ಮಂಡಳಿಯು 5 ರಿಂದ 10 ಟಿಎಂಸಿ ನೀರನ್ನು ಬಳಕೆ ಮಾಡಬಹುದಾಗಿದೆ. ಮಳೆ ನೀರು ಕಾಲುವೆಗಳ ಜಾಲದಲ್ಲಿ ಕೆರೆ ಮುಂತಾದೆಡೆ ಸಂಗ್ರಹವಾಗುವ ಮಳೆ ನೀರು ಅಂತರ್ಜಲ ಮಟ್ಟ ಸುಧಾರಿಸುವಲ್ಲಿ ನೆರವಾಗಲಿದೆ. ಸಂಸ್ಕರಣ ಘಟಕಗಳ್ಲಿ ಸಂಸ್ಕರಿಸಲ್ಪಟ್ಟ ಶೇ. 30 ನೀರನ್ನೂ ಸಹ ಕೆರೆಗಳಿಗೆ ಹರಿಸಲಿದ್ದು ಮಳೆನೀರನೊಂದಿಗೆ ಅದು ಸೇರ್ಪಡೆಯಾಗುತ್ತದೆ. ಈ ನೀರೂ ಸಹ ಭೂಮಿಯಾಳಕ್ಕೆ ಇಳಿದು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು 2016 ರ ಅಂತ್ಯದ ವೇಳೆಗೆ ವಿಸ್ತøತ ವರದಿ ಸಿದ್ದವಾಗಲಿದೆ.

ಮಂಡಳಿಯ ಆರ್ಥಿಕ ಪರಿಸ್ಥಿತಿ

ಬಳಕೆದಾರರಿಂದ ಸಂಗ್ರಹಿಸಲಾಗುವ ನೀರಿನ ದರವೇ ಮಂಡಳಿಯ ಪ್ರಮುಖ ಆದಾಯ. ಇದಲ್ಲದೆ ಮಂಡಳಿಯು, ನೈರ್ಮಲ್ಯ ಶುಲ್ಕ, ಕೊಳವೆ ಬಾವಿ ಶುಲ್ಕ ಮತ್ತು ಕನಕಪುರ ಪಟ್ಟಣ ಮತ್ತು ತಾತಗುಣಿ ಪಂಚಾಯ್ತಿ ಪ್ರದೇಶಗಳಿಗೆ ಸಗಟು ನೀರು ಪೂರೈಸುವುದು ಮುಂತಾದ ಇತರೆ ಮೂಲಗಳಿಂದಲೂ ಆದಾಯ ಉತ್ಪತ್ತಿ ಮಾಡುತ್ತಿದೆ. ಮಂಡಳಿಯು ಕಾವೇರಿ ನೀರು ಪೂರೈಕೆ ಯೋಜನೆಯ 4ನೇ ಹಂತ 2ನೇ ಘಟ್ಟದಂತಹ ಯೋಜನೆ, ಬೃಹತ್ ಬೆಂಗಳೂರು ನೀರು ಪೂರೈಕೆ, ಕರ್ನಾಟಕ ಪುರಸಭಾ ಯೋಜನೆ, ಪ್ರದೇಶಾಭಿವೃದ್ದಿ ಯೋಜನೆಗಳಂತಹ ಬೃಹತ್ ಬಂಡವಾಳ ಬಯಸುವ ಯೋಜನೆಗಳನ್ನು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ(ಜೈಕಾ) ಮತ್ತು ವಿಶ್ವಬ್ಯಾಂಕ್ ನೆರವಿನಿಂದ ಅನುಷ್ಠಾನಗೊಳಿಸಿದೆ. ಈ ಯೋಜನೆಗಳಿಗೆ ಬಂಡವಾಳದ ಮೂಲಗಳು, ಜೈಕಾ, ಕರ್ನಾಟಕ ಸರ್ಕಾರ, ವಿಶ್ವ ಬ್ಯಾಂಕ್ ಮತ್ತು ಫಲಾನುಭವಿ ವಂತಿಕೆಯಾಗಿರುತ್ತದೆ. ಬೆಸ್ಕಾಂ ಮತ್ತು ಚೆಸ್ಕಾಂಗಳಿಗೆ ಪಾವತಿಸುವ ವಿದ್ಯುತ್ ವೆಚ್ಚ, ನಗರದಲ್ಲಿನ ಕೊಳವೆ ಬಾವಿಗಳ ನಿರ್ವಹಣೆ ಮಂಡಳಿ ಅನುಷ್ಠಾನಗೊಳಿಸಿರುವ ಯೋಜನೆಗಳಿಗೆ ಪಡೆಯಲಾಗಿರುವ ಸಾಲದ ಮರುಪಾವತಿ, ಇದರ ಜೊತೆಗೆ ಸಿಬ್ಬಂದಿ ನಿರ್ವಹಣಾವೆಚ್ಚ ಮತ್ತು ಮಂಡಳಿಯ ಸ್ವತ್ತಿನ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ ಇವು ಮಂಡಳಿಯ ಪ್ರಮುಖ ವೆಚ್ಚಗಳಾಗಿವೆ.

ಆದಾಯ ಮತ್ತು ವೆಚ್ಚದ ಪರಿಸ್ಥತಿ.

  • 2015-16ನೇ ಆರ್ಥಿಕ ವರ್ಷದಲ್ಲಿ ಮಾಸಿಕ ನೀರಿನ ಆದಾಯ ಬೇಡಿಕೆ ಸುಮಾರು ರೂ.90.00 ಕೋಟಿ.
  • 2015-16ರಲ್ಲಿ ಮಾಸಿಕ ಕಂದಾಯ ವಸೂಲಾತಿ ಸುಮಾರು ರೂ.80 ಕೋಟಿ
  • ಸರ್ಕಾರಿ ಸಾಲದ ಅಸಲು ಪಾವತಿ ಮತ್ತು ಬಡ್ಡಿ ಸೇರಿ ಮರುಪಾವತಿ ಸೇರಿದಂತೆ ಮಾಸಿಕ ಕಂದಾಯ ವೆಚ್ಚ ರೂ.138.75 ಕೋಟಿ. ಇದರಿಂದ ವಾರ್ಷಿಕ ವೆಚ್ಚ ರೂ.1665.07 ಕೋಟಿ
  • ಮಾಸಿಕ ಕಂದಾಯದ ಅಂತರ ರೂ.36 ಕೋಟಿ ವಾರ್ಷಿಕ ಕಂದಾಯದ ಅಂತರ ರೂ.436 ಕೋಟಿ.
  • ವಿದ್ಯುತ್ ದರ ಹೆಚ್ಚಳ, ನಿರ್ವಹಣಾ ವೆಚ್ಚ ಮತ್ತು ಇತರೆ ಆಡಳಿತಾತ್ಮಕ ವೆಚ್ಚಗಳೇ ಈ ಅಂತರಕ್ಕೆ ಕಾರಣ.

ಸಾಲದ ಪರಿಸ್ಥಿತಿ

2014ರ ಮಾರ್ಚಿ 31ರ ವೇಳೆಗೆ(ಎಜಿ-ಆಡಿಟ್ ಪ್ರಕಾರ) ಕರ್ನಾಟಕ ಸರ್ಕಾರವು ಕಾವೇರಿ 4ನೇ ಹಂತ, 1ನೇ ಘಟ್ಟದ ಯೋಜನೆ, ಕಾವೇರಿ 4ನೇ ಹಂತ 2ನೇ ಘಟ್ಟದ ಯೋಜನೆ ಸೇರಿದಂತ ವಿವಿಧ ಯೋಜನೆಗಳಿಗೆ ಮಂಜೂರು ಮಾಡಿರುವ ಒಟ್ಟು ಸಾಲ ರೂ.3272.95 ಕೋಟಿ. 2015ರ ಮಾರ್ಚಿ 31ರ ವೇಳೆಗೆ ಉಳಿದಿರುವ ಒಟ್ಟಾರೆ ಬಾಕಿ-3597.36 ಕೋಟಿ. 2015ರ ಮಾರ್ಚಿ 30 ರ ವೇಳೆಗೆ ಸಾಲದ ಮೇಲೆ ಪಾವತಿಸಬೇಕಾದ ಬಡ್ಡಿ ಪ್ರಮಾಣ ರೂ.2085.72 ಕೋಟಿ. 2015ರ ಮಾರ್ಚಿ 30ರ ವರೆಗೆ ಎಲ್ ಐಸಿ, ಕೆಯುಐಡಿಎಫ್ ಸಿ ಮುಂತಾದ ಸಂಸ್ಥೆಗಳಿಂದ ಪಡೆಯಲಾಗಿರುವ ಸಾಲದ ಪ್ರಮಾಣ 155.87 ಕೋಟಿ.

ಆರ್ಥಿಕ ಸಂಕಷ್ಟ, ಕೊರತೆ ಹೆಚ್ಚಾಗುತ್ತಿರುವುದು ಸಮಾಜದ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಗಳಿಗೆ ಉಚಿತ ರಿಯಾಯಿತಿಯಾಗಿ ನೀರು ಕೊಡುತ್ತಿರುವುದೂ ಸೇರಿ ಮಂಡಳಿಯ ಆರ್ಥಿಕತೆಯ ಮೇಲೆ ಹೆಚ್ಚಿನ ಹೊರೆಯಾಗುದಂತೆ ಮಾಡಿದೆ.ಸರ್ಕಾರದ ಸಾಲವನ್ನು ತೀರಿಸಲು ಸಾಧ್ಯವಾಗದಂತೆ ಮಾಡಿದೆ. ಪ್ರಸ್ತುತ ಇರುವ ದರಗಳಿಂದ ನಿರ್ವಹನಾ ವೆಚ್ಚವನ್ನು ಬರಿಸಬಹದುದಾಗಿದೆ. ಮಂಡಳಿಗೆ ಕರ್ನಾಟಕ ಸರ್ಕಾರದ ಆಯ ವ್ಯಯದಲ್ಲಿ ಯಾವುದೇ ಅನುದಾನ ಇಲ್ಲದೆ ಇರುವುದರಿಂದ ಜನಸಾಮಾನ್ಯ ರಿಂದ ಸಾಲದ ವೆಚ್ಚವನ್ನು ವಸೂಲಿ ಮಾಡದೇ ಹೋದರೆ ಮಂಡಳಿಗೆ ಸಾಲವನ್ನು ಮರುಪಾವತಿ ಮಾಡುವ ಪರಿಸ್ಥಿತಿಯೇ ಇರುವುದಿಲ್ಲ.

ಸಾರ್ವಜನಿಕ ಕೊಳಾಯಿ ಮೂಲಕವೂ ಮಂಡಳಿ ನೀರು ಪೂರೈಸುತ್ತಿದ್ದು, ಇದರಿಂದಲೂ ಯಾವುದೇ ಆದಾಯ ಬರುವುದಿಲ್ಲ. ಮಂಡಳಿಗೆ 207.94 ಕೋಟಿ ಹಣ ಬಾಕಿ ಬರಬೇಕಿದೆ. ಅದರಲ್ಲಿ ಸಾರ್ವಜನಿಕ ಕೊಳಾಯಿಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಬಾಕಿ ರೂ.8.00 ಕೋಟಿ, ಬಿಬಿಎಂಪಿ ಯಿಂದ 154 ಕೋಟಿ ಸಾಕಷ್ಟು ಪ್ರಯತ್ನ ನಡೆಸಿದರೂ ಈ ಮೊತ್ತ ಸಂದಾಯವಾಗಿಲ್ಲ.

ನಗರದಲ್ಲಿ ಕೊಳವೆ ಬಾವಿಗಳ ನಿರ್ವಹಣೆಯನ್ನು ಮಂಡಳಿಗೆ ವಹಿಸಲಾಗಿದೆ. ಮಹಾನಗರ ಪಾಲಿಕೆ/ನಗರ ಸಭಾ ಪ್ರದೇಶದಲ್ಲಿನ ಕೊಳವೆ ಬಾವಿಗಳ ನಿರ್ವಹಣೆ ಕೂಡ ಮಂಡಳಿಗೆ ವಹಿಸಲಾಗಿದೆ. ಈ ಕೊಳವೆ ಬಾವಿಗಳಿಗೆ ವಿದ್ಯುತ್ ವ್ಯವಸ್ಥೆ, ನೀರು ಪಂಪ್ ಮಾಡಲು ಆಗುವ ವಿದ್ಯುತ್ ವೆಚ್ಚ ವಾರ್ಷಿಕ ರೂ394.97 ಕೋಟಿ ಆಗಲಿದ್ದು, ಇದು ಮಂಡಳಿ ಆದಾಯದ ಅರ್ಧದಷ್ಟು ಆದಾಯ ಕಬಳಿಸುತ್ತಿದೆ.

ಮಂಡಳಿಯ ಪ್ರಸ್ತುತದ ಆದಾಯದಿಂದ ಸಾಲಮರುಪಾವತಿ ಕಷ್ಟವಾಗಲಿದೆ. ಆದಾಗ್ಯೂ ಎಲ್ಲಾ ಸಂಸ್ಥೆಗಳ ಸಾಲದ ಹಣವನ್ನು ಮಂಡಳಿ ಆದಾಯದಿಂದಲೇ ನಿಭಾಯಿಸುತ್ತಿದೆ.

2013-14 ಮತ್ತು 14-15 ನೇ ಸಾಲಿನ ಆರ್ಥಿಕ ವರ್ಷದ ಆದಾಯ ಮತ್ತು ವೆಚ್ಚದ ಪಟ್ಟಿ

 
ಕ್ರ.ಸಂ ಆದಾಯD 2013-14 (ರೂ. ಕೋಟಿಗಳಲ್ಲಿ) 2014-15 (ರೂ.ಕೋಟಿಗಳಲ್ಲಿ)
ಮೀಟರ್ ಮಜೂರಿ ಸೇರಿದಂತೆ ನೀರಿನ ಕಂದಾಐ 59199.19 81103.86
ಬಿ ಇತರೆ ಆದಾಯ 14906.05 6711.60
  ಮೊತ್ತ 74105.24 87815.46
       
ಕ್ರ.ಸಂ ವೆಚ್ಚ 2013-14 2014-15
ಸಿಬ್ಬಂದಿ ವೆಚ್ಚ 15282.15 16303.85
ಬಿ ವಿದ್ಯುತ್ ವೆಚ್ಚ 35649.95 39497.69
ಸಿ ದುರಸ್ಥಿ ಮತ್ತು ನಿರ್ವಹಣೆ 9544.04 10509.48
       
ಡಿ ಸಾಮಾನ್ಯ ಆಡಳಿತ ವೆಚ್ಚ 8653.58 7933.14
ಕೊರತೆ 16330.57 16612.74
ಎಫ್ ಮನ್ನ 0.00 0.00
ಜಿ ಸಾಲದ ಮೇಲಿನ ಬಡ್ಡಿ 29985.31 30889.95
ಹೆಚ್ ಅವಕಾಶಗಳು 77.06 73.55
  ಮೊತ್ತ 11552.66 121820.40
  ಹೆಚ್ಚುವರಿ/ಕೊರತೆ 41417.42 34004.94
       
  ಕಳೆದ ವರ್ಷದ ಸಾಲದ ಹೊಂದಾಣಿಕೆ/ಸಾಲದ ಬಾಕಿ 0.00 0.00
  ಹೆಚ್ಚುವರಿ ನಿವ್ವಳ/ಕೊರತೆ -41417.42 -34004.94 
 

ಭವಿಷ್ಯದ ದೃಷ್ಠೀಕೋನ ಮತ್ತು ಸವಾಲುಗಳು

ಇತರೆ ನೀರು ಪೂರೈಕೆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಇತರೆ ಸಂಸ್ಥೆಗಳ ರೀತಿಯೇ ಜಲಮಂಡಳಿ ಸಹ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ಪ್ರಮುಖವಾದುದು ಜಲ ಸಂಪನ್ಮೂಲ ದೂರದ ಸ್ಥಳದಿಂದ ನೀರನ್ನು ತರುವ ತಾಂತ್ರಿಕ ಪರಿಹಾರಗಳನ್ನು ಜಾರಿಗೆ ತರುವಲ್ಲಿ ಆರ್ಥಿಕ ಸಂಪನ್ಮೂಲದ ಲಭ್ಯತೆ, ನೆರವು ನೀಡುವ ಸಂಸ್ಥೆಗಳನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಜಲಮಂಡಳಿಯ ದೂರಗಾಮಿ ಚಿಂತನೆ 4-5 ವಿಷಯಗಳನ್ನು ಒಳಗೊಂಡಿದೆ.

  • ಸಂಪನ್ಮೂಲದ ಲಭ್ಯತೆ
  • ನೀರಿನ ಗುಣಮಟ್ಟ ಮತ್ತು ಪ್ರಮಾಣ
  • ತ್ಯಾಜ್ಯ ನೀರಿನ್ನ ಪರಿಣಾಮಕಾರಿಯಾಗಿ ಸಂಗ್ರಹಿಸಿ, ಸಾಗಿಸಿ, ಸಂಸ್ಕರಿಸಿ ಸುರಕ್ಷಿತವಾಗಿ ವಿಲೇವಾರಿ ಮಾಡುವುದು.
  • ವಿಭಿನ್ನ ವಿಧಾನ ಮತ್ತು ತಂತ್ರಜ್ಞಾನವನ್ನು ಬಳಸಿ ನೀರಿನ ಬಹು ಉದ್ದೇಶಗಳಿಗೆ ಪುನರ್ ಬಳಕೆ ಮಾಡುವುದು. ಆರಂಭಿಕವಾಗಿ ಕುಡಿಯುವ ನೀರು ಹೊರತು ಪಡಿಸಿ ಇತರೆ ಉದ್ದೇಶಗಳಿಗೆ ಬಳಸುವುದು.
  • ನೀರಿಗೆ ಸಂಬಂಧಿಸಿದ ಅವಗಡಗಳು.

ಮೇಲಿನ ವಿಷಯಗಳನ್ನು ಬಗೆಹರಿಸಿ ಕೊಳ್ಳುವಲ್ಲಿ ಜಲಮಂಡಳಿ ಕೆಳಗಿನ ಗುರಿಗಳತ್ತ ಪ್ರಯತ್ನ ನಡೆಸಿದೆ.

  • ನೀರಿನ ಬೇಡಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
  • ನೀರಿನ ನಷ್ಟದ ಪ್ರಮಾಣ ಕಡಿಮೆ ಮಾಡುವುದು.
  • ನೀರಿನ ಸಂರಕ್ಷಣೆ ಕಾರ್ಯಕ್ರಮ.
  • ನಗರ ಜಲಾನಯನ ಪ್ರದೇಶದಿಂದ ಮಳೆನೀರು ಕೊಯ್ಲು ಮಾಡುವುದು.
  • ಪರಿಣಾಮಕಾರಿಯಾದ ಜನಜಾಗೃತಿ ಕಾರ್ಯಕ್ರಮ.

ಬೆಂಗಳೂರು ಜಲಮಂಡಳಿಯು ಕೆಳಗಿನ ಸವಾಲುಗಳನ್ನು ತಕ್ಷಣದಿಂದಲೇ ಪರಿಹರಿಸಿಕೊಳ್ಳುವುದರ ಜೊತೆಗೆ ಜಲ ಸಂಪನ್ಮೂಲಗಳ ನಿರ್ವಹಣೆ, ದೂರದಿಂದ ಅದನ್ನು ಸಾಗಿಸಿ ತರುವುದಕ್ಕೆ ತಾಂತ್ರಿಕ ಪರಿಹಾರಗಳು, ಆರ್ಥಿಕ ಸಂಪನ್ಮೂಲಗಳ ನಿರ್ವಹಣೆಯನ್ನೂ ಸಹ ಮಾಡಬೇಕಾಗಿದೆ.

  • ನೀರು ಮತ್ತು ತ್ಯಾಜ್ಯ ನೀರು ಮೂಲಸೌಕರ್ಯಗಳ ಸ್ಥಿತಿ.
  • ನೀರಿನ ಮೌಲ್ಯದ ಬಗ್ಗೆ ಜನರಲ್ಲಿ ಅರಿವಿನ ಕೊರತೆ
  • ಸುಧಾರಣಾ ಯೋಜನೆಗಳಿಗೆ ಅಗತ್ಯ ಬಂಡವಾಳದ ನೆರವು.
  • ನೀರಿನ ಕೊರತೆ/ಪೂರೈಕೆ
  • ನಿವೃತ್ತರಾಗುವ ಕಾರ್ಯಪಡೆಯ ಬದಲಾವಣೆ
  • ಗ್ರಾಹಕರು/ಸಮುದಾಯದ ಸಂಬಂಧಗಳು-ನೀರಿನ ಉಸ್ತುವಾರಿ ಎದುರಿಸುವ ಸವಾಲುಗಳ ಬಗ್ಗೆ ಮತ್ತು ಈ ಉದ್ದೇಶಕ್ಕೆ ಜನರ ಸಹಕಾರ ಪಡೆಯುವಲ್ಲಿ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮದ ಅಗತ್ಯತೆ.
  • ನೀಡಲಾಗುವ ಸೇವೆ/ಬಂಡವಾಳ ವೆಚ್ಚದ ವಸೂಲಾತಿ
  • ಸರ್ಕಾರದ ನಿಬಂಧನೆಗಳು
  • ತುರ್ತು ಯೋಜನೆಗಳು ಮತ್ತು ಪ್ರತಿಕ್ರಿಯೆ
  • ಇಂಧನ ಬಳಕೆ/ ವೆಚ್ಚ
  • ಹವಾಮಾನ ವೈಪರಿತ್ಯ
  • ಮೂಲ ಸೌಕರ್ಯಗಳ ರಕ್ಷಣೆ

2050 ರ ವರೆಗಿನ ಮುನ್ನೋಟ ದಾಖಲೆ

ಭವಿಷ್ಯದಲ್ಲಿ ತಲೆದೋರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗುವಂತೆ ಪರಿಣಾಮಕಾರಿ ನೀಲನಕ್ಷೆ ರೂಪಿಸಲು ಮಂಡಳಿಯು ಉದ್ದೇಶಿಸಿದೆ.

ಈ ಅಧ್ಯಯನ ಹೊರಬಂದಾಗ ಪುನರ್ ಬಳಕೆ ನೀರು ಸೇರಿದಂತೆ ಪ್ರಸ್ತುತ ಇರುವ ಜಲಸಂಪನ್ಮೂಲಗಳ ಸಮಗ್ರ ಮೌಲ್ಯಮಾಪನವೂ ಸೇರಿದಂತೆ ಪರ್ಯಾಯ ಮೂಲಗಳನ್ನು ಗುರುತಿಸುವುದು ಮತ್ತು ಭವಿಷ್ಯದಲ್ಲಿ ಅವುಗಳನ್ನು ಅಭಿವೃದ್ದಿ ಪಡಿಸಲು ವ್ಯವಸ್ಥಿತ ಸಿದ್ದತೆ ಮಾಡಿಕೊಳ್ಳುವುದಾಗಿದೆ.