ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಯೋಗಗಳು ಮತ್ತು ಭವಿಷ್ಯದ ಯೋಜನೆಗಳು:
ಬೆಂಗಳೂರಿನ (ಬಿಬಿಎಂಪಿ ಪ್ರದೇಶ) ವ್ಯಾಪ್ತಿಯಲ್ಲಿ 550 ಕೊಳಚೆಪ್ರದೇಶಗಳಿವೆ ಎಂದು ಕೊಳಚೆ ನಿರ್ಮೂಲನಾ ಮಂಡಳಿಯು ಅಧಿಕೃತವಾಗಿ ಗುರುತಿಸಿದೆ. ಕೇಂದ್ರ ಪ್ರದೇಶದಲ್ಲಿ 362 ಕೊಳಗೇರಿಗಳಿವೆ. ದೊಡ್ಡ ನಗರಗಳಲ್ಲಿ ಈ ಕೊಳಗೇರಿಗಳು ಅಭಿವೃದ್ಧಿಯಾದ ಪ್ರದೇಶಗಳ ಜೊತೆ ಜೊತೆಯಲ್ಲಿಯೇ ಅಸ್ತಿತ್ವದಲ್ಲಿವೆ. ಬಹುತೇಕ ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆಯಿದೆ. ಅಂತೆಯೇ ಒಳಚರಂಡಿ ಮೂಲ ಸೌಲಭ್ಯದ ಕೊರತೆಯೂ ಎದ್ದುಕಾಣುತ್ತದೆ. ನಗರದ ಬಡವರಿಗೆ ದೊರೆಯುತ್ತಿರುವ ಅಪೂರ್ಣ ಸೇವೆಗಳಿಂದಾಗಿ ಬೆಂಗಳೂರು ಜಲಮಂಡಳಿಯ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಮುಖ್ಯವೆಂದರೆ ಅಧಿಕೃತವಲ್ಲದ ಮತ್ತು ಕಾನೂನುಬಾಹಿರ ನಲ್ಲಿ ಸಂಪರ್ಕಗಳು. ಇದರಿಂದಾಗಿ ಜಲಮಂಡಳಿ ಆದಾಯಕ್ಕೂ ಹೊಡೆತ ಬೀಳುತ್ತಿದೆ. ಅಸಮರ್ಪಕವಾಗಿ ಹಾಕಿದ ನೀರು ಸರಬರಾಜು ಲೈನುಗಳು ಒಡೆಯುವುದರಿಂದಾಗಿಯೂ ನೀರಿನ ಗಣನೀಯ ಪ್ರಮಾಣದ ನಷ್ಟ ಮತ್ತು ನೀರು ಮಲಿನಗೊಳ್ಳುವ ಭೀತಿ ಕೂಡ ಮಂಡಳಿಯನ್ನು ಕಾಡುತ್ತಿದೆ. ತೆರೆದ ಚರಂಡಿಗಳು, ಮಳೆನೀರು ಚರಂಡಿಗಳಿಗೆ ನೇರವಾಗಿ ಬಿಡುವ ತ್ಯಾಜ್ಯ ನೀರು ಮೊದಲಾದುವೆಲ್ಲಾ ತೀವ್ರ ತರವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಠಿಸುವುದಲ್ಲದೆ, ಪರಿಸರವನ್ನೂ ಮಲಿನಗೊಳಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಇಂತಹವು ಮಂಡಳಿಯ ಸಾರ್ವಜನಿಕ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ. ಇವೆಲ್ಲವನ್ನು ಮನಗಂಡು ಜಲಮಂಡಳಿಯು ಆಸ್ಟ್ರೇಲಿಯಾದ ನೆರವಿನೊಂದಿಗೆ ಒಂದು ಯೋಜನೆಯನ್ನು 2000-2002 ರ ಅವಧಿಯಲ್ಲಿ ಅನುಷ್ಠಾನಗೊಳಿಸಿತು. BWSSB AusAID Master Plan ಎಂದು ಈ ಯೋಜನೆಯನ್ನು ಹೆಸರಿಸಲಾಗಿತ್ತು. ನಗರದಲ್ಲಿನ ಬಡವರಿಗೆ ಇನ್ನು ಉತ್ತಮ ಸೇವೆಗಳನ್ನು ಒದಗಿಸುವ ವಿಚಾರವನ್ನು ಈ ಯೋಜನೆಯ ಸಮುದಾಯ ಬೆಳವಣಿಗೆಯ ವಿಭಾಗ ನೋಡಿಕೊಂಡಿತ್ತು. ಈ ಉದ್ದೇಶಕ್ಕಾಗಿ ಬೆಂಗಳೂರಿನ ಕೇಂದ್ರದಲ್ಲಿರುವ ಸಿಮೆಂಟ್ ಹಟ್ಸ್, ಸುಧಾಮ ನಗರ ಮತ್ತು ಚಂದ್ರಾ ನಗರ, ಈ 3 ಕೊಳಚೆಪ್ರದೇಶಗಳನ್ನು ಆರಿಸಿಕೊಳ್ಳಲಾಯಿತು. ಈ ಪೈಲಟ್ ಪ್ರಾಜೆಕ್ಟ್ಗಳು ಅತ್ಯುತ್ತಮ ವಿದಾನಗಳನ್ನು ಅನುಸರಿಸಿ ಉತ್ತಮ ಸೇವೆಗಳನ್ನು ನೀಡುವ ಅವಕಾಶಗಳನ್ನು ಮತ್ತು ಇದುವರೆಗೆ ಸೇವೆ ದೊರಕದಿದ್ದವರಿಗೆ ಸೇವೆ ಒದಗಿಸುವ ಅನುಭವವನ್ನು ಜಲಮಂಡಳಿಗೆ ನೀಡಿತು. ಈ ಪೈಲಟ್ ಯೋಜನೆಯ ಈ ಯಶಸ್ಸು, ಉಳಿದ ಪ್ರದೇಶಗಳಿಗೂ ಈ ಕಾರ್ಯವಿಧಾನವನ್ನು ಅನ್ವಯಿಸಲು ಮತ್ತು ಜಲಮಂಡಳಿಗೆ ಲಾಭದಾಯಕವಾಗುವ ರೀತಿಯಲ್ಲಿ ಅದರ ಗ್ರಾಹಕ ಜಾಲವನ್ನು ವಿಸ್ತರಿಸಿಕೊಳ್ಳಲು ಅವಕಾಶ ನೀಡಿತು.

ಜಲಮಂಡಳಿಯ ಸಾಮಾಜಿಕ ಅಭಿವೃದ್ಧಿ ಘಟಕವು ಈ ಯೋಜನೆಯ ಯಶಸ್ಸುನ್ನು ತನ್ನ ದೈನಂದಿನ ಕಾರ್ಯಗಳಿಗೂ ವಿಸ್ತರಿಸುತ್ತಾ ನಡೆದು, ಇದನ್ನು ಸಮಗ್ರವಾಗಿ ಜಾರಿಗೊಳಿಸಲು ಒಂದು ಯೋಜನೆ ರೂಪಿಸಿತು. ಪ್ಯಾಕೇಜ್ ಪ್ರೋಗ್ರಾಂ ಎಂದು ಕರೆಯಲಾದ ಈ ಯೋಜನೆಯು ಕಾರ್ಪೋರೇಷನ್ ಮತ್ತು ಜಲಮಂಡಳಿಯ ನಡುವಣ ಜಂಟಿ ಮೂಲಭೂತ ಸೌಲಭ್ಯ ವಿಸ್ತರಣಾ ಕಾರ್ಯಕ್ರಮವಾಗಿದ್ದು, 2003 ರಿಂದ 2006 ರವಧಿಯಲ್ಲಿ ನಗರದಾದ್ಯಂತ ನೀರು ಪೂರೈಕೆ ಮತ್ತು ಒಳಚರಂಡಿ ಜಾಲವನ್ನು ವ್ಯವಸ್ಥಿತ ರೂಪದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಯಿತು. ಈ ಸಾಮಾಜಿಕ ಅಭಿವೃದ್ಧಿ ಘಟಕವು ಸರ್ಕಾರೇತರ ಸಂಸ್ಥೆಗಳು ಮತ್ತು ಇತರ ಸಾಮಾಜಿಕ ಮಧ್ಯವರ್ತಿಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಾ ಬಂದಿತ್ತು.
ಕೊಳಚೆಪ್ರದೇಶದಲ್ಲಿನ ಜನರು ಅಧಿಕೃತವಾಗಿ ಜಲಮಂಡಳಿಯ ನೀರು ಪೂರೈಕೆ ವ್ಯವಸ್ಥೆಯನ್ನು ಪಡೆದುಕೊಳ್ಳಲು ಮತ್ತು ಅನಧಿಕೃತ ಹಾದಿಯಲ್ಲಿ ಅವರು ನೀರು ಸಂಗ್ರಹಿಸಿಕೊಳ್ಳುವುದನ್ನು ತಡೆಯಲು, ಅವರನ್ನು ಪ್ರೇರೇಪಿಸುತ್ತಿದೆ. ತನ್ನ ಸಂಪರ್ಕದಲ್ಲಿ ಗಣನೀಯಕಡಿತವನ್ನು ಘೋಷಿಸಿದೆ. 150 ಚದರ ಅಡಿಗಳ ವಿಸ್ತೀರ್ಣವುಳ್ಳ ಮನೆಯೊಮದರ ಸಂಪರ್ಕಕ್ಕೆ ಕೇವಲ 550 ರೂ.ಗಳನ್ನು ನೀಡಿದರೆ ಸಾಕು (ಮೀಟರಿನ ವೆಚ್ಚ ಮಾತ್ರ) 151 ರಿಂದ 600 ಚದುರ ಅಡಿ ವಿಸ್ತೀರ್ಣವಿರುವ ಮನೆಗೆ 800 ರೂ.ಗಳನ್ನು ನೀಡಿದರೆ ಸಾಕು( ಮೀಟರಿನ ವೆಚ್ಚ 550 ರೂ. ಮತ್ತು ಒಳಚರಂಡಿ ವೆಚ್ಚ ಸಂಪರ್ಕ ವೆಚ್ಚ 250 ರೂ) 600 ಚದುರ ಅಡಿಗಳಿಗಿಂತ ಹೆಚ್ಚಿರುವ ಎಲ್ಲ ಮನೆಗಳು ನಿಯಮಿತವಾದ ದರ ನೀಡಬೇಕು. ಕೊಳಚೆಪ್ರದೇಶದ ನಿವಾಸಿಗಳು ತಮ್ಮ ಸಂಪರ್ಕ ದರಗಳನ್ನು ಎರಡು ಕಂತುಗಳಲ್ಲಿ ಬೇಕಾದರೆ ನೀಡಬಹುದು. ಅಂತೆಯೇ, ಸಂಪರ್ಕ ವ್ಯವಸ್ಥೆಯನ್ನು ಸಹ ಸರಳೀಕರಗೊಳಿಸಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕೊಳಚೆ ನಿರ್ಮೂಲನಾ ಮಂಡಳಿ ಮತ್ತು ಮಹಾನಗರ ಪಾಲಿಕೆ ನೀಡಿರುವ ಹಕ್ಕು ಪತ್ರಗಳನ್ನು ಲಗತ್ತಿಸಿ ಒಂದು ಅರ್ಜಿ ಸಲ್ಲಿಸಿದರೆ ಸಾಕು.
ಇದರ ಜೊತೆಗೆ ವಾಸಸ್ಥಳ ದೃಢೀಕರಣಕ್ಕಾಗಿ ಪಡಿತರ ಚೀಟಿ, ಮತದಾರ ಗುರುತು ಪತ್ರ, ಇಲ್ಲವೆ ಕೊಳಚೆ ನಿರ್ಮೂಲನಾ ಮಂಡಳೀ ನೀಡಿರುವ ಗುರುತಿನ ಪತ್ರ, ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಲಗತ್ತಿಸಬೇಕು.
ನಗರ ಪ್ರದೇಶದ ಬಡವರಿಗೆ ಉಚಿತ ಸಂಪರ್ಕಗಳು:
ಸಾಕಷ್ಟು ಸ್ಥಳಾವಕಾಶವಿರುವ ಮತ್ತು ಬಾಡಿಗೆಗಿರುವ ಅರ್ಜಿದಾರರು ಸಹ ಅರ್ಜಿ ಸಲ್ಲಿಸಬಹುದು. ಇವರು ಸಮುದಾಯ ಆಧಾರದ ಮೇಲೆ, ಒಂದು ಮೀಟರನ್ನು ಹಂಚಿಕೊಳ್ಳುವ ಸಂಪರ್ಕವನ್ನು ಪಡೆಯಬಹುದು. ಈ ಸೌಲಭ್ಯವನ್ನು ಬಾಡಿಗೆಗಿರುವ ಆದರೆ, ಸಾಕಷ್ಟು ಸ್ಥಳಾವಕಾಶವಿಲ್ಲದ ಮತ್ತು ಬಾಡಿಗೆಯ ರಕ್ಷಣೆ ಕೂಡ ಇಲ್ಲದ ಸಮುದಾಯಗಳು ಒಟ್ಟಾಗಿ ಪಡೆಯಬಹುದು. ಸಾರ್ವಜನಿಕ ನಲ್ಲಿಗಳಿಂದ ನೀರು ಪಡೆಯುವಲ್ಲಿ ಹೆಣಗಿ ಹೈರಾಣಾಗಿದ್ದ ನಗರ ಪ್ರದೇಶದ ಬಡವರಿಗೆ ತಮ್ಮದೇ ಆದ ಸ್ವಂತ ನಲ್ಲಿ ಸಂಪರ್ಕವನ್ನು ಹೊಂದುವುದು ಸಾಕಷ್ಟು ಖುಷಿ ತಂದಿದೆ. ಬಳಸುವ ವೆಚ್ಚಗಳನ್ನು ಪಾವತಿ ಮಾಡುವ ಈ ಸಂಸ್ಕøತಿ ದಿನೇ ದಿನೇ ಜನಪ್ರಿಯತೆ ಪಡೆದುಕೊಳ್ಳುತ್ತಾ ಹೋಗುತ್ತಿದೆ. ಸರ್ಕಾರೇತರ ಸಂಸ್ಥೆಗಳೂ ಮತ್ತು ಸಮುದಾಯ ಅಭಿವೃದ್ಧಿ ಸಂಸ್ಥೆಗಳ ಸಹಾಯದೊಂದಿಗೆ ಈ ಕೆಲಸವನ್ನು 43 ಕೊಳಚೆಪ್ರದೇಶಗಳಲ್ಲಿ ಕೈಗೊಳ್ಳಲಾಯಿತು. ಸಮುದಾಯ ಅಭಿವೃದ್ಧಿ ಘಟಕವು ಸಾರ್ವಜನಿಕ ನಲ್ಲಿಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ವೈಯುಕ್ತಿಕ ಅಥವಾ ಒಂದು ಮೀಟರ್ನ್ನು ಹಂಚಿಕೊಳ್ಳುವ ಸಂಪರ್ಕವನ್ನು ಮೇಲೆ ಹೇಳಿರುವ ವೆಚ್ಚಗಳನ್ನು ಪಾವತಿಸಿ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಹಲವಾರು ಕೊಳಚೆಪ್ರದೇಶಗಳಲ್ಲಿ ಜನರು ಅನಧಿಕೃತ ಸಂಪರ್ಕವನ್ನು ಪಡೆದು ಉಚಿತವಾಗಿ ನೀರನ್ನು ಪಡೆಯುತ್ತಿದ್ದರು. ಈ ಹಾವಳಿಯನ್ನು ತಪ್ಪಿಸಲು ಕ್ರಮಕೈಗೊಳ್ಳಲಾಗಿದೆ.
ಈ ಯೋಜನೆಯ ಯಶಸ್ಸು, ಜೆಐಸಿಎ ನೆರವಿನ ಕಾವೇರಿ ನೀರು ಸರಬರಾಜು ಯೋಜನೆಯಡಿ ಕೊಳಗೇರಿ ಅಭಿವೃದ್ಧಿಯನ್ನು ಪ್ರತ್ಯೇಕ ಘಟಕವನ್ನಾಗಿ ಕೈಗೆತ್ತಿಕೊಳ್ಳಲು ಜಪಾನ್ ಬ್ಯಾಂಕ್ ಆಫ್ ಇಂಟರ್ನ್ಯಾಷನ್ ಕೋ-ಆಪರೇಷನ್ನ್ನು ಪ್ರೇರೇಪಿಸಿತು. ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಎಲ್ಲ ಕೊಳಚೆಪ್ರದೇಶಗಳನ್ನು ಹಂತ ಹಂತವಾಗಿ ಈ ಯೋಜನೆಯಡಿ ಕೈಗೆತ್ತಿಕೊಳ್ಳುವ ಪ್ರಸ್ತಾವನೆಯಿದೆ. ಪ್ರಸ್ತುತ ಈ ಯೋಜನೆಯು ಅನುಷ್ಠಾನದಲ್ಲಿದೆ. ಮೊದಲ ಹಂತದಲ್ಲಿ 4 ಸರ್ಕಾರೇತರ ಸಂಸ್ಥೆಗಳು 96 ಕೊಳಚೆಪ್ರದೇಶದಲ್ಲಿ ಕೆಲಸ ಮಾಡಲು ಕರಾರು ಮಾಡಿಕೊಳ್ಳಲಾಗಿದೆ.
ನಗರ ಪ್ರದೇಶದ ಬಡಜನರಿಗೆ ಸೇವೆಗಳನ್ನು ನೀಡುವ ದೃಷ್ಠಿಯಿಂದ ಕೈಗೊಳ್ಳಲಾದ ಕ್ರಮಗಳ ಮೂಲಕ ಜಲಮಂಡಳಿಯು ಸಾರ್ವಜನಿಕ ಕಾರಂಜಿಗಳು ಮತ್ತು ಅನಧಿಕೃತ ಸಂಪರ್ಕಗಳಿಂದ ಉಂಟಾಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳುವ ಹಾಗೂ ಗ್ರಾಹಕರ ಜಾಲವನ್ನು ಹೆಚ್ಚಿಸಿಕೊಂಡು ತನ್ನ ಆದಾಯವನ್ನು ವೃದ್ಧಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಜಲಮಂಡಳಿಯ ಈ ಕ್ರಮಗಳಿಂದಾಗಿ ಗ್ರಾಹಕರ ಮನದಲ್ಲಿ ಸಕಾರಾತ್ಮಕವಾದ ಬದಲಾವಣೆಗಳುಂಟಾಗಿ ನೀರು ಸರಬರಾಜು ಮತ್ತು ಒಳಚರಂಡಿ ಸೇವೆಗಳಂತಹ ಸಾಮಾಜಿಕ ಸೂಕ್ಷ್ಮತೆಯಿರುವ ಕೆಲಸಗಳ ಕುರಿತು ಅವರು ಇನ್ನು ಹೆಚ್ಚು ಜವಾಬ್ದಾರಿಯುತ ನಾಗರಿಕರಾಗಲು ನೆರವಾಗಬಲ್ಲದಾಗಿದೆ.
This covers of various aspects of wide range of services provided by BWSSB such as water supply, sewerage system, which deals right from getting the connection to billing.This has been given in the common interest of the public.
ಪ್ರಕ್ರಿಯೆ
ಜಲಮಂಡಳಿ ಒದಗಿಸುವ, ನೀರು ಪೂರೈಕೆ, ಸಂಪರ್ಕ, ಬಿಲ್ಲಿಂಗ್, ಒಳಚರಂಡಿ ವ್ಯವಸ್ಥೆ ಕಲ್ಪನೆ, ಮೊದಲಾದ ಎಲ್ಲಾ ಸೇವೆಗಳನ್ನೂ ಗ್ರಾಹಕರ ಸೇವಾ ವಿಭಾಗ ಪೂರೈಸುತ್ತದೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ವಿಭಾಗ ಸೇರಿಸಲಾಗಿದೆ. ನೀರು ಪೂರೈಕೆ ಮತ್ತು ಒಳಚರಂಡಿ ಸಂಪರ್ಕಗಳನ್ನು ಪಡೆಯಲು ಜಲಮಂಡಳಿ ಒಂದು ಪ್ರಕ್ರಿಯಾ ವ್ಯವಸ್ಥೆಯನ್ನು ರೂಪಿಸಿದೆ. ಸಂಬಂಧಿತ ವಿವರಗಳನ್ನು ಈ ಕೆಳಗಿನ ಪಟ್ಟಿ ನೀಡುತ್ತದೆ. ಇಲ್ಲಿರುವ ಅರ್ಜಿ ನಮೂನೆಗಳನ್ನು, ಗ್ರಾಹಕರ ಮಾಹಿತಿ/ಮಾರ್ಗದರ್ಶನಕ್ಕಾಗಿ ಮಾತ್ರ ನೀಡಲಾಗಿದೆ. ಮುದ್ರಿತ ಅರ್ಜಿ ನಮೂನೆಗಳನ್ನು ಸಂಬಂಧಿತ ಜಲಮಂಡಳಿ ಕಚೇರಿಗಳಿಂದ ಪಡೆಯಬಹುದು. ಇಲ್ಲವೆ ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಮಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
ನೀರು/ಜಲಪೂರೈಕೆ ಮಂಜೂರಾತಿ
ಆದೇಶ: 1/2 “ ನೀರು ಪೂರೈಕೆ ಸಂಪರ್ಕ ಕಲ್ಪಿಸಲು. (ಅಪಾರ್ಟ್ಮೆಂಟ್ಗಳು, ಗೃಹೇತರ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳನ್ನು ಬಿಟ್ಟು) ಬೆಂಗಳೂರು ಮಹಾನಗರ ಪಾಲಿಕೆ, ಅಭಿವೃದ್ಧಿ ಪ್ರಾಧಿಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ, ರಸ್ತೆ ಕತ್ತರಿಸುವ ಕುರಿತು ಹಿಂಬರಹವನ್ನು ಒತ್ತಾಯಪೂರ್ವಕವಾಗಿ ಕೇಳುವಂತಿಲ್ಲ. ಆದರೂ ರಸ್ತೆಯನ್ನು ಅಗೆದು ಸಂಪರ್ಕ ಪಡೆದ ನಂತರ ಅವನ್ನು ಮುಚ್ಚುವ, ರಸ್ತೆಗಳಿಗೆ ಮೊದಲಿನಂತೆ ಟಾರುಹಾಕಿಸುವ, ವೆಚ್ಚಗಳನ್ನು ಮಂಡಳಿ ಪಡೆದುಕೊಳ್ಳಬೇಕು ಮತ್ತು ರಸ್ತೆಯನ್ನು ಅಗೆಯುವ ಏಜೆನ್ಸಿಯೇ ರಸ್ತೆಯನ್ನು ಪುನ: ಅದರ ಸ್ವಸ್ಥಿತಿಗೆ ತರುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಈ ಕೆಲಸಗಳನ್ನು ತೃಪ್ತಿದಾಯಕವಾಗಿ ಪೂರೈಸಿದ ನಂತರವೇ ಸಂಪರ್ಕಗಳಿಗೆ ನೀರು ಪೂರೈಸಬೇಕು ಮತ್ತು ರಸ್ತೆ ರಿಪೇರಿ ಕೆಲಸಗಳಿಗಾಗಿ ಪ್ಲಂಬರು/ಗುತ್ತಿಗೆದಾರರಿಗೆ ಪಾವತಿಯನ್ನು/ ಹಣವನ್ನು ಬಿಡುಗಡೆ ಮಾಡಬೇಕು.

ರಸ್ತೆ ಕಡಿವ ದರಗಳು ಈ ಕೆಳಗಿನಂತಿರುತ್ತವೆ
ಅರ್ಜಿ ವಿಶ್ಲೇಷಣಾ ಸಮಯ:
ಖಾತೆ/ ಹೆಸರು ಬದಲಾವಣೆ
10 ರೂನ ಪತ್ರದ ಮೇಲೆ ಅಫಿಡವಿಟ್ (ಸ್ವಯಂ ಘೋಷಿತ ಪ್ರಮಾಣ ಪತ್ರ) ಮಂಜೂರು ಮಾಡಲು ಕಾಲಮಿತಿ- 3 ದಿನಗಳು
ಹೆಚ್ಚುವರಿ ಸಂಖ್ಯೆಯ ಸಂಪರ್ಕಗಳಿಗೆ ಅನುಮತಿ.
ಒಳಚರಂಡಿ ಸಂಪರ್ಕದ ಕಾರ್ಯಾದೇಶ
ಒಳಚರಂಡಿ ಸಂಪರ್ಕದ ಕಾರ್ಯಾದೇಶ
ಮಂಜೂರು ಮಾಡಲು ಕಾಲಮಿತಿ- 10 ದಿನಗಳು
2400 ಚದರಡಿ, ನೆಲ ಮತ್ತು 2 ಮಹಡಿಗಳಿಗೆ ನೀರು ಪೂರೈಕೆ ಸಂಪರ್ಕ
2400 ಚದರಡಿ, ಗೃಹೇತರ, ಗೃಹ ಕಟ್ಟಡಕ್ಕೆ ನೀರು ಮತ್ತು ಒಳಚರಂಡಿ ಸಂಪರ್ಕ
ಬಿಡಿಎ/ ಬಿಬಿಎಂಪಿಯಿಂದ ಮಂಜೂರಾದ ನಕ್ಷೆ
ಬಿಡಿಎ/ ಬಿಬಿಎಂಪಿಯಿಂದ ಮಂಜೂರಾದ ನಕ್ಷೆ
ಮುಖ್ಯ ಇಂಜಿನಿಯರ್ (ಗುಣಮಟ್ಟ ಆಶ್ವ್ವಾಸನೆ) ಇವರ ಕಚೇರಿಯು ಬೆಂಗಳೂರಿನ ಕಾವೇರಿ ಭವನ 9 ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿ ಈ ರೀತಿಯಿದೆ.
ಮುಖ್ಯ ಇಂಜಿನಿಯರ್ ( ಗುಣಮಟ್ಟ ಆಶ್ವಾಸನೆ)
ದೂರವಾಣಿ- 080-22945253
ಹೆಚ್ಚುವರಿ ಮುಖ್ಯ ಇಂಜಿನಿಯರ್ ( ಗುಣಮಟ್ಟ ಆಶ್ವಾಸನೆ)
ದೂರವಾಣಿ -080- 22945253
ತಾಂತ್ರಿಕ ಸಹಾಯಕರು
ದೂರವಾಣಿ 080- 22945253
ಮುಖ್ಯ ಇಂಜಿನಿಯರ್ (ಗುಣಮಟ್ಟ ಆಶ್ವಾಸನೆ) ಇವರ ನಿಯಂತ್ರಣದಲ್ಲಿ ಕೆಳಕಂಡ ವಿಭಾಗಗಳಿದ್ದು, ಅವುಗಳ ಕಾರ್ಯ ಹೀಗಿದೆ.

ಕಾರ್ಯನಿರ್ವಾಹಕ ಅಭಿಯಂತರ ( ಗುಣಮಟ್ಟ ಆಶ್ವಾಸನೆ) ದೂರವಾಣಿ -22945201
ಕಾರ್ಯನಿರ್ವಾಹಕ ಅಭಿಯಂತರ (ಗು.ಆ) ಇವರ ಕಚೇರಿಯು ಮಲ್ಲೇಶ್ವರಂನಲ್ಲಿದೆ. ಬೆಂಗಳೂರು ನಗರದ ಎಲ್ಲ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಸಂಪೂರ್ಣ ಗುಣಮಟ್ಟ ನಿಯಂತ್ರಣದ ಜವಾಬ್ದಾರಿ, ಕಾರ್ಯನಿರ್ವಾಹಕ ಅಭಿಯಂತರ (ಗು.ಆ) ಮತ್ತು ಮಲ್ಲೇಶ್ವರಂನಲ್ಲಿಯೇ ಇರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಂಡದ್ದು.
ಕಾರ್ಯನಿರ್ವಾಹಕ ಅಭಿಯಂತರ (ಗು.ಆ) ಇವರಿಗೆ ಕೇಂದ್ರ ನೀರು ಪರೀಕ್ಷಾ ಪ್ರಯೋಗಾಲಯದ (ಸೆಂಟ್ರಲ್ ವಾಟರ್ ಟೆಸ್ಟಿಂಗ್ ಲ್ಯಾಬೊರೇಟರಿ) ಸೌಲಭ್ಯ ಒದಗಿಸಲಾಗಿದೆ. ಈ ಪ್ರಯೋಗಾಲಯ ಬೆಂಗಳೂರಿನ ಹೈಗ್ರೌಂಡ್ಸ್ನಲ್ಲಿದೆ. ನಗರದ ವಿವಿಧ ಭಾಗಗಳಿಂದ, ಬೋರ್ವೆಲ್ಗಳಿಂದ, ಕೊಳಚೆಪ್ರದೇಶಗಳಿಂದ ಸಂಗ್ರಹಿಸಿದ ನೀರಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ನೀರಿನಲ್ಲಿ ಮಣ್ಣಿನ ಅಂಶ, ಅದರ ಪಿಹೆಚ್ ಮೌಲ್ಯ, ಅದರಲ್ಲಿರುವ ಕ್ಲೋರಿನ್ನ ಅಂಶ ಮತ್ತು ಗೃಹಬಳಕೆಗೆ ಅದರ ಅರ್ಹತೆ ಮೊದಲಾದ ವಿಷಯಗಳ ಕುರಿತು ಇಲ್ಲಿ ಪರೀಕ್ಷಿಸಲಾಗುತ್ತದೆ. ಜಲಮಂಡಳಿಯು ಸಂಚಾರಿ ಪ್ರಯೋಗಾಲಯಗಳನ್ನು ಕೂಡ ಹೊಂದಿದೆ. ಇವುಗಳು ಸ್ಥಳದಲ್ಲಿಯೇ ನೀರಿನ ಗುಣಮಟ್ಟ ಪರೀಕ್ಷೆ ಮಾಡಲು ಸಮರ್ಥವಾಗಿವೆ.
ಕಾರ್ಯನಿರ್ವಾಹಕ ಅಭಿಯಂತರ( ಸೆಂಟ್ರಲ್ ಸ್ಟೋರ್ಸ್)
ದೂರವಾಣಿ-22945205
ಮಂಡಳಿಯ ವಿವಿಧ ಕೆಲಸಗಳಿಗೆ ಬೇಕಾದ, ಎಲ್ಲ ರೀತಿಯ ಸಾಮಾಗ್ರಿಗಳನ್ನೂ ಉದಾಹರಣೆಗೆ, ಸ್ಟೀಲ್ ಹಂದರಗಳು, ಸಿಮೆಂಟ್ ಪೈಪುಗಳು, ನೀರಿನ ಮೀಟರುಗಳು, ದ್ರವ ಕ್ಲೋರಿನ್ ಮೊದಲಾದ ಎಲ್ಲ ಸಾಮಾಗ್ರಿಗಳನ್ನೂ ಖರೀದಿಸುವ ಜವಾಬ್ದಾರಿ ಸೆಂಟ್ರಲ್ ಸ್ಟೋರ್ಸ್ನ ಕಾರ್ಯನಿರ್ವಾಹಕ ಅಭಿಯಂತರದು. ಇವರ ಕಚೇರಿ ಮಲ್ಲೇಶ್ವರಂನಲ್ಲಿದೆ.
ಕಾರ್ಯನಿರ್ವಾಹಕ ಅಭಿಯಂತರು (ಜಲ ಪರಿಶೋಧನೆ ಮತ್ತು ನಿಯಂತ್ರಣ)
ದೂರವಾಣಿ ಸಂಖ್ಯೆ: 22945116
ಇವರ ಕಚೇರಿ ಕಾವೇರಿಭವನದ 7 ನೇ ಮಹಡಿಯಲ್ಲಿದೆ. ಇವರ ಅಧೀನದಲ್ಲಿ 3 ಉಪವಿಭಾಗಗಳಿವೆ. ನಗರದಾದ್ಯಂತ ನೀರು ಸೋರುವುದನ್ನು ಪತ್ತೆ ಹಚ್ಚಿ ಅದನ್ನು ಸರಿಪಡಿಸುವ ಜವಾಬ್ದಾರಿ ಈ ಶಾಖೆಯದು. ಲೆಕ್ಕಕ್ಕೆ ಸಿಗದ ನೀರನ್ನು (ನೀರು ಪೂರೈಕೆ ಸಂಪರ್ಕಗಳೊಂದಿಗೆ) ಪತ್ತೆ ಹಚ್ಚುವುದು ಈ ಶಾಖೆಯ ಬಹುಮುಖ್ಯ ಕಾರ್ಯ. ಲೆಕ್ಕಕ್ಕೆ ಸಿಗದ ನೀರಿನ ಹರಿವಿನ ಪ್ರಮಾಣವನ್ನು ತಗ್ಗಿಸುವುದರ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಈ ಶಾಖೆಯನ್ನು ಮಾಹಿತಿ ತಂತ್ರಜ್ಞಾನ ಶಾಖೆಯೊಂದಿಗೆ ಮತ್ತು ಈ ಸಂಬಂಧದ ಇತರ ಕಾಲಬದ್ಧ ಚಟುವಟಿಕೆಗಳೊಂದಿಗೆ ಬೆಸೆಯಲಾಗಿದೆ. ಕೆಳಕಂಡ ಚಟುವಟಿಕೆಗಲತ್ತ ಈ ಶಾಖೆಮುಖ್ಯವಾಗಿ ಗಮನ ಕೇಂದ್ರೀಕರಿಸುತ್ತದೆ.
ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗಗಳು, ಉಪವಿಭಾಗಗಳು ಮತ್ತು ಸೇವಾ ಕೇಂದ್ರಗಳ ದಾಖಲೆಗಳನ್ನು ಪರಿಶೀಲಿಸುವುದು.
ಇಲ್ಲಿ ಇರಿಸಿರುವ ಲೆಡ್ಜರುಗಳು, ಬಾಕಿ ಪಟ್ಟಿ, ದೋಷಪೂರ್ಣ ಮೀಟರುಗಳ ತಖ್ತೆ, ಮಂಜೂರಾತಿ ಕಡತಗಳು, ನೀರು ಮತ್ತುಒಳಚರಂಡಿ ವ್ಯವಸ್ಥೆ ಪೂರೈಕೆಗಾಗಿ ಬಂದ ಅರ್ಜಿಗಳು, ನೀರು ಸಂಪರ್ಕಗಳ ಬದಲಾವಣೆ ಕಡತಗಳು ಮೊದಲಾದ ದಾಖಲೆಗಳನ್ನು ಪರಿಶೀಲಿಸುವುದು.
ದಾಸ್ತಾನು ವಹಿಯ ಮರುಪರಿಶೀಲನೆ (ಸೇವಾ ಕೇಂದ್ರಗಳು ಮತ್ತು ಕಾಮಗಾರಿ ಸ್ಥಳಗಳಲ್ಲಿ)
ನೀರು ತುಂಬುವ ಪಾಯಿಂಟ್ಗಳ ಪರಿಶೀಲನೆ
ಸಾರ್ವಜನಿಕ ಅಹವಾಲುಗಳಿಗೆ ಮತ್ತು ಉನ್ನತಾಧಿಕಾರಿಗಳ ನಿರ್ದೇಶನಗಳಿಗೆ ಉತ್ತರಿಸುವುದು
ಉನ್ನತಾಧಿಕಾರಿಗಳು ವಹಿಸುವ ಇನ್ನಾವುದೇ ತನಿಖೆ ಮಾಡುವುದು
ವಿವಿಧ ಕಾಮಗಾರಿಗಳ ಪರಿಶೀಲನೆ, ಯೋಜನೆಗಳ ಪರಿಶೀಲನೆ, ನೀರಿನ ಗುಣಮಟ್ಟ ಪರಿಶೀಲನೆ ಮತ್ತು ಸೂಕ್ತ ಸಲಹೆಗಳನ್ನು ನೀಡುವ ಕಾರ್ಯವನ್ನೂ ಈ ಶಾಖೆ ನಿರ್ವಹಿಸುತ್ತದೆ. ಕಾಮಗಾರಿ ನಡೆಯುವ ಸ್ಥಳದಿಂದ ಕಾಂಕ್ರೀಟ್ ಸ್ಯಾಂಪಲುಗಳನ್ನೂ ಪಡೆದು ಈ ಶಾಖೆ ಪರಿಶೀಲನೆ ನಡೆಸುತ್ತದೆ. ನೀರು ಪೂರೈಕೆ ಪೈಪುಗಳಲ್ಲಿನ ಸತುವಿನ ಬಂಧವನ್ನೂ (ಲೀಡ್ ಜಾಯಿಂಟ್ಸ್) ಇದು ಪರಿಶೀಲಿಸುತ್ತದೆ. ನೀರು ಸಂಗ್ರಹಾಗಾರಗಳಾದ ನೆಲಮಟ್ಟದ ಜಲಾಗಾರಗಳು, ಎತ್ತರದ ಜಲಾಗಾರಗಳು, ನೀರಿನ ಸಂಪ್ಗಳು ಪೈಪುಗಳ ಹೈಡ್ರಾಲಿಕ್ ಪರೀಕ್ಷೆಯನ್ನು ನಡೆಸುವ ಈ ಶಾಖೆ, ನೆಲದಾಳದ ಒಳಚರಂಡಿ ಮಾರ್ಗಗಳಲ್ಲಿ ಸರಿಯಾದ ಹರಿವು, ಆರ್ಸಿಸಿ ಪೈಪುಗಳ ಗುಣಮಟ್ಟ, ಕ್ಲೊರಿನೇಟರುಗಳ ಕಾರ್ಯಕ್ಷಮತೆ ವಿಭಾಗ, ಉಪವಿಭಾಗ, ಸೇವಾಕೇಂದ್ರಗಳ ಕಾಲಬದ್ಧ ಪರಿಶೀಲನೆಯನ್ನೂ ಈ ಶಾಖೆ ಮಾಡುತ್ತದೆ.
ಕೇಂದ್ರ ನೀರು ಪರೀಕ್ಷಾ ಪ್ರಯೋಗಾಲಯ (ಸಿಡ್ಲ್ಯೂಟಿಎಲ್) ಮತ್ತು ಮೀಟರ್ ಪರೀಕ್ಷೆ ಮತ್ತು ಸರ್ವಿಸಿಂಗ್ ಪ್ರಯೋಗಾಲಗಳನ್ನು ಈ ಶಾಖೆಯೊಂದಿಗೆ ಬೆಸೆಯಲಾಗಿದೆ.
ಕೇಂದ್ರ ನೀರು ಪರೀಕ್ಷಾ ಪ್ರಯೋಗಾಲಯ ಮತ್ತು ಮೀಟರ್ ಪರೀಕ್ಷೆ ಮತ್ತು ಸರ್ವಿಸಿಂಗ್ ಪ್ರಯೋಗಾಲಯಗಳಲ್ಲಿ ಇಬ್ಬರು ನುರಿತ ರಸಾಯನ ಶಾಸ್ತ್ರಜ್ಞರಿದ್ದಾರೆ. ನಗರದಾದ್ಯಂತ ವಿವಿಧ ಸ್ಥಳಗಳಲ್ಲಿನ ಸೇವಾ ಕೇಂದ್ರಗಳಿಂದ, ನೆಲಮಟ್ಟದ ಮತ್ತು ಎತ್ತರದ ಜಲಾಗಾರಗಳಿಂದ ನೀರಿನ ಮಾದರಿಗಳನ್ನು ತಿಂಗಳಿಗೆ 16 ಮಾದರಿಗಳಂತೆ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ನೀರಿನ ಗುಣಾತ್ಮಕತೆಯ ಕುರಿತು ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗುತ್ತದೆ.
ಉಪವಿಭಾಗಗಳಿಗೆ ಮಾಹಿತಿಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲಾಗುತ್ತಿದೆ. ಬೆಂಗಳೂರಿನ ನಾಗರಿಕರಿಗೆ ಅಂತರರಾಷ್ಟ್ರೀಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟದಿಂದ ಕೂಡಿದ ನೀರನ್ನು ಪೂರೈಸಲು ಜಲಮಂಡಳಿ ಬದ್ಧವಾಗಿದೆ.
ವಿವಿಧ ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಅವಿಗಳನ್ನು ವಿಶ್ಲೇಶಿಸಲು ಸಾಮಥ್ರ್ಯವಿರುವ ಉಪಕರಣಗಳ ಕಿಟ್ನೊಂದಿಗೆ ಸಜ್ಜಾಗಿರುವ ವ್ಯಾನ್ಗಳೇ ಸಂಚಾರಿ ಪ್ರಯೋಗಾಲಯಗಳು. ಇಲ್ಲಿ ಸಂಗ್ರಹಿಸಿದ ನೀರನ್ನು ನೀರಿನ ಭೌತಿಕ, ರಾಸಾಯನಿಕ ಮತ್ತು ಅಣುಜೀವಿಗಳ ಸ್ಥಿತಿಗತಿಗಳಿಗಾಗಿ ಪರಿಶೀಲಿಸಲಾಗುತ್ತದೆ. ಹೀಗೆ ಸಂಗ್ರಹಿಸಲಾದ ಯಾವುದಾದರೂ ನೀರಿನ ಮಾದರಿ ಗೃಹಬಳಕೆಗೆ ಸಾಧುವಲ್ಲ ಎಂದು ಕಂಡುಬಂದರೆ, ಕೂಡಲೇ ಸಂಬಂಧಿಸಿದವರಿಗೆ ಸೂಚನೆ ನೀಡಿ ಈ ದೋಷವನ್ನು ಸರಿಪಡಿಸುವ ಕ್ರಮವನ್ನು ಕೈಗೊಳ್ಳಲಾಗುತ್ತದೆ. ದೋಷಪೂರಿತ ನೀರು ಸಂಗ್ರಹವಾದ ಕಡೆಯಲ್ಲಿ ನೀರನ್ನು ಹಲವಾರು ಬಾರಿ ಪರೀಕ್ಷೆಗೊಳಪಡಿಸಿ, ಅದು ಬಳಕೆಗೆ ಉಪಯುಕ್ತ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತದೆ.
ವಿತರಣಾ ಜಾಲವನ್ನು ಹೊರತುಪಡಿಸಿ, ನೀರಿನ ಮಾದರಿಗಳನ್ನು ಜಲಮಂಡಳಿ ಹೊಂದಿರುವ ಕೊಳವೆಬಾವಿಗಳಿಂದಲೂ ಸಂಗ್ರಹಿಸಲಾಗುತ್ತದೆ. ಇವುಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ನೀರಿನಲ್ಲಿರುವ ನೈಟ್ರೇಟ್ ಅಂಶಗಳಿಗಾಗಿ ಶೋಧ ಮಾಡಲಾಗುವುದು. ಯಾವುದಾದರೂ ಮಾದರಿ ಕುಡಿಯಲು ಉಪಯುಕ್ತವಲ್ಲ ಎಂದು ಕಂಡುಬಂದರೆ, ಸಂಬಂಧಿಸಿದ ಸೇವಾ ಕೇಂದ್ರಕ್ಕೆ ಸೂಚನೆ ನೀಡಿ ಅದು ಈ ಬಾವಿಯ ಬಳಿ “ ಈ ನೀರು ಕುಡಿಯಲು ಯೋಗ್ಯವಲ್ಲ” ಎಂಬ ಫಲಕವನ್ನು ಪ್ರದರ್ಶಿಸುವಂತೆ ಆದೇಶಿಸಲಾಗುತ್ತದೆ. ನೀರಿನ ಗುಣಮಟ್ಟ- ಎಚ್ಚರಿಕೆ ಎನ್ನುವ ಕಾರ್ಯಕ್ರಮದಡಿ ಹೀಗೆ ಸಂಗ್ರಹಿಸಲಾದ ಮಾದರಿಗಳ ಎಲ್ಲ ವಿವರಗಳನ್ನು ಕ್ರೋಢೀಕರಿಸಲಾಗುತ್ತದೆ. ಪ್ರಸ್ತುತ ಜಲಮಂಡಳಿಯಲ್ಲಿ ಪ್ರೆಸಿ ಮ್ಯಾಗ್, ಕ್ಯಾಪ್ಸ್ಟನ್ ಮತ್ತು ಅಕ್ಟಾರಿಸ್ ಕಂಪನಿಗಳ ಮೀಟರುಗಳನ್ನು ಬಳಸಲಾಗುತ್ತಿದೆ.